ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷಿತ ಆಕ್ಷನ್ ಚಿತ್ರ ‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಹರಸಾಹಸ ಪಡುತ್ತಿದೆ. ಐದು ವರ್ಷಗಳ ನಿರೀಕ್ಷೆಯ ಬಳಿಕ ತೆರೆ ಕಂಡ ಈ ಸಿನಿಮಾ ಇದೀಗ ಮೊದಲ ನಾಲ್ಕು ದಿನಗಳಲ್ಲಿ ಕೇವಲ 75 ಕೋಟಿ ಕಲೆಕ್ಷನ್ ಮಾಡಿದೆ. ಪ್ರೀಮಿಯರ್ ಶೋಗಳೊಂದಿಗೆ ಮೊದಲ ದಿನ 47 ಕೋಟಿ ಗಳಿಸಿದ್ದರೂ, ನಂತರದ ದಿನಗಳಲ್ಲಿ ಸಿನಿಮಾ ಗಳಿಕೆಯಲ್ಲಿ ಕುಸಿತ ಕಂಡಿದೆ.
ಶುಕ್ರವಾರ 8 ಕೋಟಿ, ಶನಿವಾರ 9 ಕೋಟಿ ಮತ್ತು ಭಾನುವಾರ 11 ಕೋಟಿ ಗಳಿಸಿ, ಸಿನಿಮಾವೊಂದು 100 ಕೋಟಿ ಕ್ಲಬ್ ಸೇರ್ಪಡೆಯತ್ತ ನಿಧಾನವಾಗಿ ಸಾಗುತ್ತಿದೆ. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರಕ್ಕೆ ಈ ಗಳಿಕೆ ಸಮರ್ಪಕವಲ್ಲ ಎನ್ನಲಾಗಿದೆ. ಪವನ್ ಕಲ್ಯಾಣ್ ಅವರ ರಾಜಕೀಯದಿಂದಾಗಿ ಸಿನಿಮಾ ಶೂಟಿಂಗ್‌ನಲ್ಲಿ ನಿರಂತರತೆ ಕಾಪಾಡಲಾಗಲಿಲ್ಲ. ಚಿತ್ರವೊಂದು ಹಲವು ವರ್ಷಗಳ ಕಾಲ ವಿಳಂಬವಾಗಿದ್ದು, ನಿರ್ದೇಶಕರ ಬದಲಾವಣೆ, ಗ್ಯಾಪ್‌ಗಳಿಂದಾಗಿ ಕಂಟಿನ್ಯೂಇಟಿ ಸಮಸ್ಯೆ ಎದುರಾಗಿದೆ.
ಪವನ್ ಅವರ ಕಂಬ್ಯಾಕ್ ಸಿನಿಮಾ ಎಂಬ ನಿರೀಕ್ಷೆ ಇದ್ದರೂ, ಹಾರ್ಡ್‌ಕೋರ್ ಅಭಿಮಾನಿಗಳ ಹೊರತಾಗಿ ಸಾಮಾನ್ಯ ಪ್ರೇಕ್ಷಕರು ತಾತ್ಸಾರ ತೋರಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಮುಂಬರುವ ವಾರಗಳಲ್ಲಿ ಇನ್ನಷ್ಟು ಶೋ ಹಿನ್ನಡೆ ಸಂಭವಿಸಬಹುದು.
ಕರ್ನಾಟಕದಲ್ಲಿ ರಾಜ್ ಬಿ ಶೆಟ್ಟಿ ನಿರ್ಮಿಸಿರುವ ‘ಸು ಫ್ರಮ್ ಸೋ’ ಹೆಚ್ಚು ಶೋಗಳನ್ನ ಪಡೆದಿದ್ದು, ಕೆಲ ಚಿತ್ರಮಂದಿರಗಳಲ್ಲಿ ಪವನ್ ಕಲ್ಯಾಣ್ ಸಿನಿಮಾವನ್ನು ತೆಗೆಯಲಾಗಿದೆ. ಇದು ‘ಹರಿ ಹರ ವೀರ ಮಲ್ಲು’ ಸೋಲಿಗೆ ಪ್ರಮುಖ ಕಾರಣವಾಗಿದೆ.