ಆಂಧ್ರಪ್ರದೇಶದಲ್ಲಿ ನಾಯ್ಡುಗೆ ಪವನ್ ಕಲ್ಯಾಣ್ ಸಾಥ್: 118 ಅಭ್ಯರ್ಥಿಗಳ ಪಟ್ಟಿ ಘೋಷಣೆ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಜಂಟಿಯಾಗಿ 118 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದಾರೆ.

ಪವನ್ ಕಲ್ಯಾಣ್ ತಮ್ಮ ಪಕ್ಷವು 24 ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ ಎಂದು ಶನಿವಾರ ಘೋಷಿಸಿದ್ದಾರೆ.

ಉಂಡವಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿಡಿಪಿ ಮುಖ್ಯಸ್ಥರು 94 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಜನಸೇನೆ 5 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆದರೆ, ಪವನ್ ಕಲ್ಯಾಣ್ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

ನಾವು 3 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ, ಇದರ ಜೊತೆಗೆ ಬಿಜೆಪಿ ಮೈತ್ರಿಗೆ ಸೇರುವುದನ್ನು ಪರಿಗಣಿಸಿ, ನಾವು ನಮ್ಮ ಸ್ಥಾನಗಳನ್ನು ಕಡಿಮೆ ಮಾಡಿದ್ದೇವೆ ಎಂದು ಅವರು ಹೇಳಿದರು, 2019 ರಲ್ಲಿ ಕನಿಷ್ಠ 10 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ನಾವು ಹೆಚ್ಚಿನ ಕ್ಷೇತ್ರ ಕೇಳಬಹುದಿತ್ತು ಎಂದು ಪವನ್ ಹೇಳಿದ್ದಾರೆ.

ಉಭಯ ಪಕ್ಷಗಳ ಮೊದಲ ಪಟ್ಟಿಯಲ್ಲಿ ಘೋಷಿಸಲಾದ 99 ಅಭ್ಯರ್ಥಿಗಳ ಪೈಕಿ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಿಂದ ಅವರ ಪುತ್ರ ನಾರಾ ಲೋಕೇಶ್ ಮಂಗಳಗಿರಿ, ಕೆ ಅಚ್ಚನಾಯ್ಡು ತೆಕ್ಕಲಿ, ಎನ್ ಬಾಲಕೃಷ್ಣ ಹಿಂದೂಪುರ ಮತ್ತು ಜೆಎಸ್‌ಪಿ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂದ್ಲ ಮನೋಹರ್ ತೆನಾಲಿಯಿಂದ ಸ್ಪರ್ಧಿಸಲಿದ್ದಾರೆ.

ಟಿಡಿಪಿ ಪಟ್ಟಿಯಲ್ಲಿರುವ 94 ಅಭ್ಯರ್ಥಿಗಳಲ್ಲಿ 23 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ, ಇದು ಸಾಂಪ್ರದಾಯಿಕ ರಾಜಕೀಯ ತಂತ್ರಗಳಿಂದ ಧೈರ್ಯಶಾಲಿ ಬದಲಾವಣೆಯನ್ನು ಸೂಚಿಸುತ್ತದೆ. ಪಟ್ಟಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 28 ಅಭ್ಯರ್ಥಿಗಳು, ಸ್ನಾತಕಪೂರ್ವ ಪದವಿ ಹೊಂದಿರುವ 50 ಅಭ್ಯರ್ಥಿಗಳು, 3 ವೈದ್ಯರು, 2 ಪಿಎಚ್‌ಡಿ ಪದವೀದರರು ಮತ್ತು ಓರ್ವ ಐಎಎಸ್ ಅಧಿಕಾರಿ ಸೇರಿದ್ದಾರೆ ಎಂದು ನಾಯ್ಡು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!