ಸಿಂಗಾಪುರದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಪುತ್ರನಿಗೆ ಗಾಯ: ಆರೋಗ್ಯದ ಕುರಿತು ಚಿರಂಜೀವಿ ನೀಡಿದ್ರು ಮಾಹಿತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಆರೋಗ್ಯದ ಕುರಿತು ಚಿರಂಜೀವಿ ಮಾಹಿತಿ ಹಂಚಿಕೊಂಡಿದ್ದಾರೆ.

ಶಂಕರ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಗುಣಮುಖನಾಗೋದಾಗಿ ಅವರು ತಿಳಿಸಿದ್ದಾರೆ.

ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮಾರ್ಕ್ ಶಂಕರ್‌ನನ್ನು ನೋಡಲು ಪವನ್ ಕಲ್ಯಾಣ್ ಜೊತೆ ಚಿರಂಜೀವಿ ದಂಪತಿ ಸಿಂಗಾಪುರಕ್ಕೆ ಹೋಗಿದ್ದಾರೆ. ಈ ಬೆನ್ನಲ್ಲೇ ಪವನ್ ಪುತ್ರನ ಆರೋಗ್ಯ ಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಿರಂಜೀವಿ ಬರೆದುಕೊಂಡಿದ್ದಾರೆ. ನಮ್ಮ ಮಗ ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದರೆ ಅವನು ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ನಮ್ಮ ಕುಲದೇವರಾದ ಆಂಜನೇಯನ ಕೃಪೆ ಮತ್ತು ಕರುಣೆಯಿಂದ, ಮಾರ್ಕ್ ಶಂಕರ್ ಶೀಘ್ರದಲ್ಲೇ ಸಂಪೂರ್ಣ ಗುಣವಾಗಿ, ಮೊದಲಿನಂತೆ ಆಗಲಿದ್ದಾನೆ. ಹನುಮಾನ್ ಜಯಂತಿಯಂದು ಆ ಪುಟ್ಟ ಮಗುವನ್ನು ದೊಡ್ಡ ಅಪಾಯ, ದುರಂತದಿಂದ ರಕ್ಷಿಸುವ ಮೂಲಕ ಆ ದೇವರು ನಮ್ಮೊಂದಿಗೆ ನಿಂತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಏ.8ರಂದು ಸಿಂಗಾಪುರದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದ ಮಾರ್ಕ್ ಶಂಕರ್ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಒಂದು ಮಗು ಸಾವನ್ನಪ್ಪಿದ್ದರೆ ಇನ್ನೂ ಕೆಲವು ಮಕ್ಕಳು ಗಾಯಗೊಂಡಿದ್ದರು. ಅದರಲ್ಲಿ ಪವನ್ ಪುತ್ರ ಶಂಕರ್‌ಗೆ ಕೈ ಮತ್ತು ಕಾಲುಗಳಿಗೂ ಗಾಯವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here