ಅಗ್ನಿ ಅವಘಡದಿಂದ ಮಗ ಬಚಾವ್‌; ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಪವನ್ ಕಲ್ಯಾಣ್ ಪತ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಂಗಾಪುರದಲ್ಲಿನ ಶಾಲೆಯಲ್ಲಿ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವನ್‌ ಕಲ್ಯಾಣ್‌ ಹಾಗೂ ಅನ್ನಾ ಲೆಜ್ನೆವಾ ಪುತ್ರ ಸದ್ಯ ಅಪಾಯದಿಂದ ಪಾರಾಗಿದ್ದಾರೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ.

ಪವನ್‌ ಕಲ್ಯಾಣ್‌ ಪುತ್ರ ಮಾರ್ಕ್‌ ಶಂಕರ್‌ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಸಿಂಗಾಪುರಕ್ಕೆ ಹೋಗಿದ್ದ ಪವನ್, ಇದೀಗ ಪತ್ನಿ ಅನ್ನಾ ಲೆಜ್ನೆವಾ ಮತ್ತು ಮಕ್ಕಳನ್ನು ಅಲ್ಲಿಂದ ಸುರಕ್ಷಿತವಾಗಿ ಹೈದರಾಬಾದ್‌ಗೆ ವಾಪಸ್ ಕರೆತಂದಿದ್ದಾರೆ. ಇನ್ನು, ಪತಿ ಜೊತೆ ಹೈದರಾಬಾದ್‌ಗೆ ಬರುತ್ತಿದ್ದಂತೆಯೇ, ಸಂಜೆಯೇ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಮುಡಿ ಕೊಟ್ಟಿದ್ದಾರೆ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ. ಪವನ್ ಕಲ್ಯಾಣ್ ತಮ್ಮ ಕೆಲಸದಲ್ಲಿ ಬ್ಯುಸಿ ಇರುವುದರಿಂದ ಅನ್ನಾ ಒಬ್ಬರೇ ತಿರುಪತಿಗೆ ಆಗಮಿಸಿ, ಮುಡಿ ಸಮರ್ಪಿಸಿದ್ದಾರೆ.

ಹೈದರಾಬಾದ್‌ಗೆ ಮಗ ಮಾರ್ಕ್ ಶಂಕರ್‌ನೊಂದಿಗೆ ವಾಪಸಾದ ನಟ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಕುಟುಂಬದ ಜೊತೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಧನ್ಯವಾದಗಳು” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!