ಎರಡನೇ ಮಗುವಿಗೆ ತಯಾರಾಗಿದ್ದೀರಾ? ಮೊದಲ ಮಗುವಿನ ನಂತರ ಮಿನಿಮಮ್ ಎರಡು ವರ್ಷಗಳ ಗ್ಯಾಪ್ ನೀಡಿ. ಇನ್ನೂ ಬಿಟ್ಟರೂ ಒಳ್ಳೆಯದೆ, ನಿಮ್ಮ ಆರೋಗ್ಯ, ವಯಸ್ಸು, ಕೆಲಸ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮತ್ತೊಂದು ಮಗುವಿಗೆ ಪ್ಲಾನ್ ಮಾಡಿ. ಅದಕ್ಕೂ ಮುನ್ನ ಈ ವಿಷಯಗಳ ಬಗ್ಗೆ ಗಮನ ಇಡಿ..
1. ನಿಮ್ಮ ಮೊದಲನೇ ಕಂದ ಶೇರಿಂಗ್ ಅಂದರೆ ಏನು ಅನ್ನೋದನ್ನೇ ಕಲಿಯದೇ ರಾಜನಂತೆ ಇರುತ್ತದೆ. ಈಗ ಇನ್ನೊಂದು ಮಗು ಜೊತೆ ಎಲ್ಲವನ್ನೂ ಹಂಚಿಕೊಳ್ಳಬೇಕಾದರೆ ಮೊದಮೊದಲು ಕಿರಿಕಿರಿ ಎನಿಸಬಹುದು. ಮೊದಲು ನಿಮ್ಮ ಮಗುವಿಗೆ ಅವರಿಗೊಬ್ಬ ತಮ್ಮನೋ ತಂಗಿಯೋ ಬರುತ್ತಿದ್ದಾರೆ ಎಂದು ತಿಳಿಸಿ ಹೇಳಿ. ನೀನು ಅಣ್ಣ/ಅಕ್ಕ ಆಗುತ್ತಿದ್ದೀಯ ಎಂದು ತಿಳಿಸಿ ಹೇಳಿ. ಹೊಸ ರೋಲ್ ಬಗ್ಗೆ ಎಕ್ಸೈಟ್ ಆಗುವಂತೆ ಮಾಡಿ.
2. ಎರಡು ಮಕ್ಕಳನ್ನು ಸಾಕುವುದು ಸುಲಭ ಅಲ್ಲ. ಈಗಿನ್ನು ಒಳ್ಳೆ ನಿದ್ದೆ ಮಾಡೋಕೆ ಶುರು ಮಾಡಿರ್ತೀರಿ. ಈಗಿನ್ನೂ ಫೀಡಿಂಗ್ ಬಿಡಿಸಿರುತ್ತೀರಿ. ನಿಮಗೂ ರಿಕವರ್ ಆಗಲು ಸಮಯ ಬೇಕು. ಎರಡನೇ ಮಗು ಬಂದಾಗ ಆಗುವ ಕಷ್ಟ, ಕೆಲಸ, ಎಲ್ಲವನ್ನೂ ನೆನಪಿನಲ್ಲಿಡಿ. ಆದರೆ ಎಷ್ಟೇ ಕಷ್ಟ ಆದರೂ ಮಕ್ಕಳನ್ನು ಸಾಕೋದು ಪುಣ್ಯದ ಕೆಲಸ ಅನ್ನೋದು ಮರೆಯಬೇಡಿ.
3. ನಿಮ್ಮ ಜೀವನದ ಪ್ರೊಸೆಸ್ ಬಗ್ಗೆ ನಂಬಿಕೆ ಇಡಿ. ನೀವು ಇರುವವರೆಗೂ ನಿಮ್ಮ ಮಕ್ಕಳನ್ನು ನೋಡಿಕೊಳ್ತೀರಿ. ಬಟ್ ನಿಮ್ಮ ನಂತರ ಅವರಿಗೆ ತವರು ಮನೆ ಅನ್ನೋದಕ್ಕೆ ಅರ್ಥ ಇರೋದಿಲ್ಲ. ಆದರೆ ಅಕ್ಕನೋ ತಂಗಿಯೋ ಇದ್ದರೆ ಅವರು ಜೊತೆಯಾಗಿ ಇರುತ್ತಾರೆ.
4. ಮೊದಲ ಮಗುವಿಗೆ ಶೇರಿಂಗ್ ಬಗ್ಗೆ ಮಾಹಿತಿ ನೀಡಿ, ನಿನ್ನ ಬಟ್ಟೆ, ನಿನ್ನ ಆಟಸಾಮಾನುಗಳು ಎಲ್ಲವನ್ನೂ ಶೇರ್ ಮಾಡಬೇಕಾಗುತ್ತದೆ ಎಂದು ಹೇಳಿಕೊಡಿ. ಮಗುವಿಗೆ ಪ್ರೀತಿ ಬರುವ ಹಾಗೆ ಮನಸ್ಸಿಗೆ ತುಂಬಿಸಿ
5. ನಿಮ್ಮ ಆರೋಗ್ಯವನ್ನು ಒಮ್ಮೆ ಚೆಕ್ ಮಾಡಿಸಿ, ಎರಡನೇ ಮಗುವಿಗೆ ನಿಮ್ಮ ದೇಹ ತಯಾರಾಗಿದ್ಯಾ? ಮಾನಸಿಕವಾಗಿ ನೀವು ರೆಡಿ ಇದ್ದೀರಾ? ಗಮನಿಸಿ.. ಇದರ ಜೊತೆಗೆ ಹಣಕಾಸಿನ ಪರಿಸ್ಥಿತಿ ಹೇಗಿದೆ ಎನ್ನುವ ಬಗ್ಗೆಯೂ ಆಲೋಚಿಸಿ.