ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಜನರಿಗೆ ಆಸ್ತಿ ತೆರಿಗೆ ಕಟ್ಟಲು ಜುಲೈ 31 ಕಡೇ ದಿನವಾಗಿದ್ದು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಒಟ್ಟಾರೆ 5,200 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇತ್ತು, ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು 20 ಲಕ್ಷ ಪ್ರಾಪರ್ಟಿಗಳನ್ನು ಗುರುತಿಸಿದ್ದೇವೆ. ಇದರಲ್ಲಿ 1,300 ಕೋಟಿ ಆಸ್ತಿ ತೆರಿಗೆ ಬಂದಿದೆ. 3,900 ಕೋಟಿ ಆಸ್ತಿ ತೆರಿಗೆ ಬರಬೇಕು. ಯಾರಿಗೆ ಎಷ್ಟೇ ತೊಂದರೆ ಇದ್ದರೂ ಜುಲೈ 31 ರೊಳಗೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿ ಅಂತಾ ಡೆಡ್ ಲೈನ್ ನೀಡಿದ್ದಾರೆ.
ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಕಟ್ಟಲು ಅವಕಾಶವಿದೆ. ಚುನಾವಣೆ ಇದ್ದ ಕಾರಣಕ್ಕೆ ಆಸ್ತಿ ತೆರಿಗೆಗೆ ಒತ್ತಾಯ ಮಾಡಿರಲಿಲ್ಲ. ಪೆನಾಲ್ಟಿ ಇಲ್ಲದೆ, ಬಡ್ಡಿ ಇಲ್ಲದೆ ಆಸ್ತಿ ತೆರಿಗೆ ಕಟ್ಟಲು ಜುಲೈ 31 ರವರೆಗೆ ಅವಕಾಶವಿದೆ. ಬೆಂಗಳೂರು ನಾಗರೀಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅದೇ ರೀತಿ ದಾಖಲೆ ಕೊಟ್ಟರೆ ಪರಿಶೀಲನೆ ಮಾಡ್ತೇವೆ. ಎ ಖಾತಾ, ಬಿ ಖಾತಾ ಕೊಡಬೇಕು, ಪರಿಶೀಲನೆ ಮಾಡಿ ನೋಡ್ತೀವಿ. ಪ್ರಾಪರ್ಟಿಗಳನ್ನು ಡಿಜಿಟಲ್ ಮೂಲಕ ಸ್ಕ್ಯಾನ್ ಮಾಡ್ತಿದ್ದೇವೆ. ಮನೆಬಾಗಿಲಿಗೆ ದಾಖಲೆ ನೀಡುವ ಪ್ರಯತ್ನ ನಡೆಯಲಿದೆ. ಮೂರು ತಿಂಗಳೊಳಗೆ ಎಲ್ಲ ಆಸ್ತಿ ದಾಖಲೀಕರಣ ಮುಗಿಸಬೇಕು ಅಂತಾ ಸ್ಪಷ್ಟಪಡಿಸಿದರು.