ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. 3567 ಕೋಟಿ ರೂ.ಪಾವತಿಸುವಂತೆ ಹೊಸದಾಗಿ ನೊಟೀಸ್ ನೀಡಿದೆ ಎಂದು ಭಾನುವಾರ ಕಾಂಗ್ರೆಸ್ ತಿಳಿಸಿದೆ.
2014-15 ರಿಂದ 2016-17ರವರೆಗಿನ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ 1,745 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೊಟೀಸ್ ಬಂದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದಿಂದ ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿಸುವಂತೆ ಡಿಮ್ಯಾಂಡ್ ನೊಟೀಸ್ ನೀಡಲಾಗಿದೆ.
2014-15ನೇ ವರ್ಷ 663 ಕೋಟಿ ರೂ., 2015-16ನೇ ವರ್ಷ 664 ಕೋಟಿ ರೂ., 2016-17ನೇ ವರ್ಷ 417 ಕೋಟಿ ರೂ. ತೆರಿಗೆ ಬಡ್ಡಿ ಹಾಗೂ ದಂಡಕ್ಕೆ ಸಂಬಂಧಿಸಿದಂತೆ ಹೊಸದಾಗಿ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶುಕ್ರವಾರ ನೀಡಲಾದ ನೊಟೀಸ್ ನಲ್ಲಿ ಸುಮಾರು 1,823 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಲಾಗಿತ್ತು
ತರಿಗೆ ನೊಟೀಸ್ಸ್ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೊಟೀಸ್ ನೀಡಿದೆ.