ಕ್ವಾಲಿಫೈಯರ್ 1 ರಲ್ಲಿ ಸೆಣಸಾಡಲಿವೆ PBKS vs RCB! ಮಳೆ ಬಂದ್ರೆ ಕಥೆ ಏನು? ಯಾವ ಟೀಮ್ ಫೈನಲ್ಸ್ ಗೆ ಎಂಟ್ರಿ ಆಗುತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ವಾಲಿಫೈಯರ್ 1 ಮ್ಯಾಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆಲುವು ಪಡೆದ ತಂಡ ನೇರವಾಗಿ ಫೈನಲ್ ಗೆ ಎಂಟ್ರಿಯಾಗಲಿದ್ದಾರೆ ಅನ್ನೋ ವಿಷ್ಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಪಂದ್ಯ ಮಳೆಯಿಂದ ರದ್ದಾದರೆ ಏನಾಗತ್ತೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರಬಹುದು ಅದ್ಕಕೆ ಉತ್ತರ ಕೊಡ್ತೀವಿ ನೋಡಿ.

ಕ್ವಾಲಿಫೈಯರ್ 1 ಪ್ಲೇ ಆಫ್ಸ್ ಹಂತದ ಮೊದಲ ಪಂದ್ಯ, ಇಲ್ಲಿ ಲೀಗ್ ಹಂತದಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ. ಸೋಲುಂಡ ತಂಡ ಕ್ವಾಲಿಫೈಯರ್ 2 ರಲ್ಲಿ ಮತ್ತೊಂದು ಪಂದ್ಯ ಆಡಲಿದೆ.

ಕ್ವಾಲಿಫೈಯರ್ 1 ಪಂದ್ಯಕ್ಕೆ ರಿಸರ್ವ್ ಡೇ ಇಲ್ಲ, ಮಳೆ ಅಥವಾ ಕೆಟ್ಟ ಹವಾಮಾನ ಎದುರಾದರೆ ಪಂದ್ಯ ರದ್ದಾಗಲಿದೆ, ಒಂದು ತಂಡ ಫೈನಲ್ ಸೇರಲಿದೆ. ಏಕೆಂದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ತಂಡ ನೇರ ಫೈನಲ್ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಳ್ಳಲಿದೆ.

ಸದ್ಯ ಪಂಜಾಬ್ ಮೊದಲ ಸ್ಥಾನದಲ್ಲಿದ್ದು, ಆರ್​ಸಿಬಿ ಎರಡನೇ ಸ್ಥಾನದಲ್ಲಿ ಇದ್ದು, ಇದರ ಅರ್ಥ ಕ್ವಾಲಿಫೈಯರ್ ರದ್ದಾದರೆ ಪಂಬಾಜ್ ನೇರ ಫೈನಲ್ ಪ್ರವೇಶ ಮಾಡಲಿದೆ. ಬೆಂಗಳೂರು ತಂಡ ಕ್ವಾಲಿಫೈಯರ್ 2ನೇ ಪಂದ್ಯವನ್ನು ಆಡಬೇಕಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!