ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಡಿಎಸ್ ವ್ಯಾಪಾರಿಗಳ ಕಮಿಷನ್ ಪ್ರತಿ ಕೆಜಿ ಅಕ್ಕಿಗೆ 1.24 ರೂ.ನಿಂದ 1.5 ರೂ.ಗೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಫಲಾನುಭವಿಗಳಿಗೆ ಮಾಹಿತಿ ನೀಡಿದ್ಧರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ಯೋಜನೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿತರಣಾ ಸಂಸ್ಥೆಯ ಬಹುದಿನಗಳ ಆಶಯವಾದ ಈ ಘೋಷಣೆಯನ್ನು ಮಾಡಿದ್ದಾರೆ.
ಈ ಯೋಜನೆಯನ್ನು ಸಿದ್ದರಾಮಯ್ಯ ಅವರು ಸಿಎಂ ಆದ ಮೊದಲ ಅವಧಿಯಲ್ಲಿ ಘೋಷಿಸಿದ್ದರು. ಕರ್ನಾಟಕದ ಹಸಿವನ್ನು ಹೋಗಲಾಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದ ಸಿಎಂ, ಬಿಜೆಪಿ ಭಾರತವನ್ನು “ಕಾಂಗ್ರೆಸ್ ಮುಕ್ತ” ಮಾಡಲು ಬಯಸುತ್ತಿದ್ದರೆ, ಕಾಂಗ್ರೆಸ್ ಭಾರತವನ್ನು “ಹಸಿವು ಮುಕ್ತ” ಮಾಡಲು ಬಯಸುತ್ತದೆ ಎಂದು ಅವರು ಹೇಳಿದರು.