April 25, 2026
Saturday, April 25, 2026
spot_img

ಗೆಲುವಿನ ಸಂಭ್ರಮಕ್ಕೆ ‘ದಂಡ’ದ ಬಿಸಿ: ಪಂಜಾಬ್ ನಾಯಕನಿಗೆ 12 ಲಕ್ಷ ರೂಪಾಯಿ ಫೈನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಈಗ ದಂಡದ ಬಿಸಿ ತಟ್ಟಿದೆ. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ನಾಯಕ ಶ್ರೇಯಸ್ ಅಯ್ಯರ್‌ ಅವರಿಗೆ ಐಪಿಎಲ್ ಶಿಸ್ತು ಸಮಿತಿಯು 12 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮಾರ್ಚ್ 31 ರಂದು ನಡೆದ ಪಂದ್ಯದಲ್ಲಿ ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಕ್ಕಾಗಿ (ನಿಧಾನಗತಿಯ ಓವರ್ ರೇಟ್) ಈ ಕ್ರಮ ಕೈಗೊಳ್ಳಲಾಗಿದೆ. ಈ ಋತುವಿನಲ್ಲಿ ತಂಡವು ಮಾಡಿದ ಮೊದಲ ತಪ್ಪು ಇದಾಗಿರುವುದರಿಂದ ಕನಿಷ್ಠ ದಂಡವಾಗಿ 12 ಲಕ್ಷ ರೂ.ಗಳನ್ನು ವಿಧಿಸಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡ 6 ವಿಕೆಟ್ ನಷ್ಟಕ್ಕೆ 162 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಚಾಣಾಕ್ಷ ಬ್ಯಾಟಿಂಗ್ ಪ್ರದರ್ಶಿಸಿ 165 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ, ಮೈದಾನದಲ್ಲಿ ಸಿಕ್ಕ ಈ ಗೆಲುವಿನ ಸಿಹಿ, ನಾಯಕನಿಗೆ ಬಿದ್ದ ದಂಡದ ಸುದ್ದಿಯಿಂದಾಗಿ ಸ್ವಲ್ಪ ಕಹಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !