ಹೊಸದಿಗಂತ ವರದಿ ಕಾಸರಗೋಡು:
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳವು ಉಪ್ಪಳ ಬಳಿಯ ಬೇಕೂರು ಸರಕಾರಿ ಶಾಲೆಯಲ್ಲಿ ಜರಗುತ್ತಿರುವ ನಡುವೆ ವೇದಿಕೆಯ ಮುಂಭಾಗ ಹಾಕಲಾಗಿದ್ದ ಶೀಟು ಆಕಸ್ಮಿಕವಾಗಿ ಕುಸಿದು ಅದರಡಿಯಲ್ಲಿದ್ದ ಮಕ್ಕಳ ಮೇಲೆ ಬಿದ್ದಿರುವುದರಿಂದ ನೂರಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡರು.
ಶುಕ್ರವಾರ ಅಪರಾಹ್ನ ಈ ಘಟನೆ ನಡೆದಿದ್ದು, ಮುಖ್ಯ ವೇದಿಕೆಯಾದ್ದರಿಂದ ಹಲವಾರು ಮಂದಿ ಇದರೊಳಗೆ ಇದ್ದು ಚಪ್ಪರ ಶೀಟಿನಡಿಯಲ್ಲಿ ಸಿಲುಕಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಮಂಗಳೂರು, ಕಾಸರಗೋಡು ಸಹಿತ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಣಳಕ್ಕೆ ತಲುಪಿದ್ದಾರೆ. ಮಕ್ಕಳ ಸಹಿತ ಎಸ್ಕೊರ್ಟಿಂಗ್ ಟೀಚರ್ಸ್ ಹಾಗೂ ತೀರ್ಪುಗಾರರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.