ಪೆನ್ನಾರ್ ನದಿ ನೀರು ಹಂಚಿಕೆ ಕೇಸ್: ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್‌ನ ಇಬ್ಬರು ಜಡ್ಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೆನ್ನಾರ್ ನದಿ ನೀರು ಹಂಚಿಕೆ (Pennaiyar river dispute) ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆ ನಡೆಯುತ್ತಿದೆ.ಆದ್ರೆ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ (AS Bopanna) ಮತ್ತು ಎಂ ಎಂ ಸುಂದ್ರೇಶ್ (MM Sundresh) ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವಿನ ಸಂಬಂಧಿತ ವಿಚಾರಣೆಯಾಗಿದ್ದು, ಈ ಇಬ್ಬರೂ ನ್ಯಾಯಮೂರ್ತಿಗಳು ಸಂಬಂಧಿತ ವಿವಾದಿತ ರಾಜ್ಯಗಳ ಮೂಲದವರಾಗಿದ್ದು, ಹಾಗಾಗಿ ಹಿಂದೆ ಸರಿದಿದ್ದಾರೆ .

ಬುಧವಾರ ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಇಬ್ಬರೂ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ಒಂದು ವೇಳೆ ನಾವು ಅರ್ಜಿ ವಿಚಾರಣೆ ಆರಂಭಿಸಿದರೆ, ವಿವಾದಕ್ಕೆ ಸಂಬಂಧಸಿದಂತೆ ನಾವಿಬ್ಬರೂ ಜಗಳಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಅಲ್ಲದೇ, ಮತ್ತೊಂದು ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರಿಗೆ ಕೋರಿದರು.

ಜಸ್ಟೀಸ್ ಎ ಎಸ್ ಬೋಪಣ್ಣ ಅವರು ಕರ್ನಾಟಕದವರಾದರೆ, ಜಸ್ಟೀಸ್ ಎಂ ಎಂ ಸುಂದ್ರೇಶ್ ಅವರು ತಮಿಳುನಾಡಿನವರಾಗಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯವು ತನ್ನ ಅಫಿಡವಿಟ್ ಸಲ್ಲಿಸಿದೆ. ಅಂತರ್ ರಾಜ್ಯ ಜಲ ವಿವಾದಗಳ ಕಾಯ್ದೆ 1956 ರ ಅಡಿಯಲ್ಲಿ ಪೆನ್ನಯಾರ್ ಜಲ ವಿವಾದ ನ್ಯಾಯಾಧಿಕರಣ ರಚನೆಯ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸೆಕ್ರೆಟರಿಯೇಟ್‌ಗೆ ಪರಿಗಣನೆಗೆ ಸಲ್ಲಿಸಲಾಗಿದೆ ಮತ್ತು ಕೇಂದ್ರ ಸಚಿವ ಸಂಪುಟದ ಅನುಮೋದನೆಗೆ ಕೇಳಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.

ಪೆನ್ನಾರ್ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ರಚಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮೂಲ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!