ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಬೀದಿ-ಬೀದಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವಸತಿ ಇಲಾಖೆಯಲ್ಲಿ ಅಕ್ರಮ ಸತ್ಯ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಅಕ್ರಮ ಆಗಿಲ್ಲ ಅಂತಲೇ ಹೇಳಬೇಕು. ಅದು ಬಿಟ್ಟು ಇನ್ನೇನು ಹೇಳೋಕೆ ಸಾಧ್ಯ? ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅಂತ 224 ಶಾಸಕರಿಗೂ ಗೊತ್ತಿದೆ, ಶಾಸಕರು ಅವರ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹಣ ತೆಗೆದುಕೊಂಡು ಹೋಗಬೇಕಾದ್ರೆ ಎಲ್ಲಾ ಇಲಾಖೆಗಳಲ್ಲೂ ಪೇಮೆಂಟ್ ಆಗಬೇಕು ಇದೇ ಅವರ ಹಣೆಬರಹ ಎಂದು ಲೇವಡಿ ಮಾಡಿದ್ದಾರೆ.
ಭೂತದ ಬಾಯಿಯಲ್ಲಿ ಭಾಗವತ್ಗೀ ಗೀತೆ