ಹೊಸದಿಗಂತ ವರದಿ ಚಿಕ್ಕಮಗಳೂರು :
ಮುಸುಕುದಾರಿ ಕಳ್ಳರ ಗ್ಯಾಂಗ್ ವೊಂದು ಆಯುಧಗಳ ಸಮೇತ ನಡುರಾತ್ರಿ ನಗರದಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.
ದಂಟರಮಕ್ಕಿ ಬಡಾವಣೆಯ ಬೈಪಾಸ್ ರಸ್ತೆಯಲ್ಲಿ ಕಳ್ಳರ ತಂಡ ಕಂಡುಬಂದಿದ್ದು, ರಾಮಕೃಷ್ಣ ಕಾಲೇಜು ಬಳಿ ಮನೆಯೊಂಂದನ್ನು ದರೋಡೆ ಮಾಡಿದ್ದಾರೆ. ಒಂಟಿ ಮನೆಗಳ ಕಳ್ಳತನಕ್ಕೆ ಹೊಂಚುಹಾಕುವ ತಂಡ ಕಿಂಚಿತ್ತೂ ಭಯವಿಲ್ಲದೆ ಟಾರ್ಚ್ ಲೈಟ್ ಹಾಕುತ್ತ ಓಡಾಡಿದ್ದಾರೆ.
ಭಯಭೀತರಾಗಿರುವ ಸಾರ್ವಜನಿಕರು ಕಳ್ಳರ ಸೆರೆಗೆ ಒತ್ತಾಯಿಸಿದ್ದಾರಲ್ಲದೆ, ರತ್ರಿ ಗಸ್ತು ಬಿಗಿಗೊಳಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.