ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ನಲ್ಲಿ ಹುಟ್ಟಿದವರು ವಿಭಿನ್ನ ಗುಣದವರು, ಎಷ್ಟು ತಾಳ್ಮೆ ಇದೆಯೋ ಅಷ್ಟೇ ಕೋಪವೂ ಇವರಿಗೆ ಇದೆ, ಪ್ರತೀ ತಿಂಗಳಿನಲ್ಲಿ ಹುಟ್ಟಿದವರಿಗೂ ಬೇರೆ ಬೇರೆ ಗುಣಗಳಿವೆ, ಆಗಸ್ಟ್ ತಿಂಗಳಿನ ನಿಮ್ಮ ಸ್ನೇಹಿತರು, ಕ್ರಶ್, ಪತಿ-ಪತ್ನಿ, ಸಂಬಂಧಿಕರ ಬಗ್ಗೆ ತಿಳಿದುಕೊಳ್ಳೋಕೆ ಇದು ಸಹಾಯ ಮಾಡುತ್ತದೆ..
ಇವರಿಗೆ ಕೋಪ ಬರಿಸೋದು ಸುಲಭ, ಬೇಗನೇ ಉರ್ಕೋತಾರೆ.
ಇವರು ಯಾವಾಗಲೂ ದೊಡ್ಡ ವ್ಯಕ್ತಿಗಳಾಗಿರುತ್ತಾರೆ, ಎಲ್ಲರನ್ನೂ ಕ್ಷಮಿಸುತ್ತಾರೆ.
ಇವರು ದೊಡ್ಡ ಲೀಡರ್ಸ್ ಆಗುವ ಕೆಪಾಸಿಟಿ ಹೊಂದಿರುತ್ತಾರೆ.
ಕ್ರಿಯೇಟೀವ್ ಜನರು, ಒಳ್ಳೆ ಒಳ್ಳೆ ಐಡಿಯಾಗಳನ್ನು ಇಟ್ಟಿರುತ್ತಾರೆ.
ಇವರಿಗೆ ಮನೆ, ಮನಸ್ಸು ಸದಾ ಕ್ಲೀನ್ ಆಗಿರಬೇಕು. ಇಲ್ಲವಾದರೆ ಕಿರಿಕಿರಿ ಮಾಡುತ್ತಾರೆ.
ಇವರಿಗೆ ಗಿಫ್ಟ್ಸ್ ಇಷ್ಟ, ಸರ್ಪ್ರೈಸ್ ಮಾಡುವುದು ಇಷ್ಟ.
ಯಾವಾಗಲೂ ಆರೋಗ್ಯದ ಬಗ್ಗೆ ಗಮನ ಕೊಡ್ತಾರೆ, ಅಡುಗೆ, ಊಟ, ತಿನ್ನೋದು ಇಷ್ಟದ ಸಬ್ಜೆಕ್ಟ್.
ಉತ್ತಮ ಡಿಸಿಶನ್ ತೆಗೆದುಕೊಳ್ಳೋದಿಲ್ಲ, ಕೆಲವು ಸಂದರ್ಭಗಳಲ್ಲಿ ಓವರ್ ಆಗಿ ರಿಯಾಕ್ಟ್ ಮಾಡುವ ಟೆಂಡೆನ್ಸಿ ಹೊಂದಿರುತ್ತಾರೆ.
ದುಡ್ಡಿನ ವಿಷಯದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳೋದಿಲ್ಲ.
ಭಾವನಾತ್ಮಕ ಜೀವಿಗಳು, ಎಲ್ಲರನ್ನೂ ಸಮನಾಗಿ ಕಾಣುತ್ತಾರೆ. ಅವರನ್ನು ಜನರು ಹೇಗೆ ಟ್ರೀಟ್ ಮಾಡಬೇಕು ಎಂದು ಬಯಸುತ್ತಾರೋ ಅದೇ ರೀತಿ ಎಲ್ಲರನ್ನು ಟ್ರೀಟ್ ಮಾಡುತ್ತಾರೆ.
ಒಮ್ಮೆ ಯಾರನ್ನಾದರೂ, ಯಾವುದೇ ವಸ್ತುವನ್ನಾದರೂ ಬೇಡ ಎಂದು ಡಿಸೈಡ್ ಮಾಡಿದರೆ ಮತ್ತೆ ಆ ಕಡೆ ಮುಖ ಮಾಡೋದಿಲ್ಲ.
ತಮಾಷೆ ಸ್ವಭಾವ, ಎಲ್ಲರನ್ನೂ ನಗಿಸ್ತಾರೆ.
ಕಷ್ಟದ ಸಂದರ್ಭದಲ್ಲಿ ಜನರನ್ನು ಈಸಿಯಾಗಿ ನೋಡಿಕೊಳ್ತಾರೆ, ತಮ್ಮ ದುಡಿಮೆಯಲ್ಲೇ ಬದುಕಲು ಇಷ್ಟ.
ಹಗಲುಗನಸು ಕಾಣ್ತಾರೆ, ಸದಾ ಆಗದ ವಿಚಾರಗಳ ಬಗ್ಗೆ ಕನಸು ಕಾಣ್ತಾರೆ.
ರೊಮ್ಯಾಂಟಿಕ್ ಅಲ್ಲವೇ ಅಲ್ಲ, ಪ್ರೀತಿಸೋಕೂ ಕಷ್ಟಕರ ಜೀವಿಗಳು. ಆದರೆ ಒಮ್ಮೆ ಇಷ್ಟಪಟ್ಟರೆ ಮೋಸ ಮಾಡುವವರಲ್ಲ.
ಜೀವನದ ಬಗ್ಗೆ ಭಯ ಇಲ್ಲ, ಇಂದಷ್ಟೇ ನಮ್ಮದು ಎನ್ನುವ ಜನ.
ಇವರ ಮುಖವೇ ಕನ್ನಡಿ, ಬಾಯಲ್ಲಿ ಏನೇ ಮಾತನಾಡಿದ್ರೂ ಮುಖ ಸತ್ಯ ಹೇಳತ್ತೆ. ಸ್ವೀಟ್ ಟಾಕರ್ಸ್ ಹಾಗೇ ಈಸಿಯಾಗಿ ಜನರನ್ನು ಮ್ಯಾನುಪಲೇಟ್ ಮಾಡ್ತಾರೆ.
ಆರ್ಟ್ಸ್, ಮೆಡಿಸಿನ್, ರಿಸರ್ಚ್ ಹಾಗೂ ಮ್ಯಾನೇಜ್‌ಮೆಂಟ್ ಇಷ್ಟದ ಫೀಲ್ಡ್ಸ್