ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದವರ ಗುಣಲಕ್ಷಣಗಳ ಬಗ್ಗೆ ತಿಳಿಯೋಕೆ ಆಸಕ್ತಿ ಇದೆಯಾ? ಹಾಗಿದ್ರೆ ಇದನ್ನು ಖಂಡಿತಾ ಓದಿ…
- ಈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಎಲ್ಲರಿಗಿಂತ ತುಸು ಉದ್ದ, ಹಾಗೂ ಸ್ಮಾರ್ಟ್ ಆಗಿರುತ್ತಾರೆ.
- ಫೆಬ್ರವರಿಯಲ್ಲಿ ಹುಟ್ಟಿದವರು ನೋಡೋದಕ್ಕೆ ಆಕರ್ಷಕವಾಗಿ ಇರುತ್ತಾರಂತೆ.
- ಸಾಕಷ್ಟು ಆಲೋಚನೆ ಮಾಡುವ ಇವರು, ದೀರ್ಘವಾಗಿ ಯೋಚಿಸದೇ ಯಾವ ಕೆಲಸವನ್ನೂ ಮಾಡೋದಿಲ್ಲ.
- ಇವರ ಮೈಂಡ್ ಒಂದು ಸಮಯಕ್ಕೆ ಒಂದೇ ಕಡೆ ಇರೋದಿಲ್ಲ, ನೂರಾರು ವಿಷಯಗಳು ಇವರ ಮನಸ್ಸನ್ನು ಹಾದು ಹೋಗುತ್ತಲೇ ಇರುತ್ತದೆ.
- ಸಿಕ್ಕಾಪಟ್ಟೆ ಕ್ರಿಯೇಟಿವ್ ವ್ಯಕ್ತಿಗಳು, ಕೆಲಸ ಗಿಟ್ಟಿಸಿಕೊಳ್ಳೋದು ಸುಲಭ.
- ಬೇಗ ಕೋಪ ಬರುತ್ತದೆ, ಸಿಟ್ಟಿನಲ್ಲಿ ಏನನ್ನಾದರೂ ಮಾಡಿಬಿಡುತ್ತಾರೆ.
- ಯಾವಾಗಲೂ ಪ್ರಾಮಾಣಿಕತೆ ಸಂದೇಶ ಸಾರುತ್ತಾರೆ, ಸಂಗಾತಿಗೆ ನಿಯತ್ತಾಗಿರುತ್ತಾರೆ.
- ಒಂದು ಕಡೆ ತಮ್ಮ ಸಮಯ ವಿನಿಯೋಗಿಸಿದರೆ ಅಲ್ಲಿ ಏನಾದರೂ ಒಂದು ಲಾಭ ಪಡೆದೇ ಪಡೆಯುತ್ತಾರೆ.
- ದುಡ್ಡಿನ ಹಿಂದೆ ಬೀಳುತ್ತಾರೆ, ಬೇಗ ಶ್ರೀಮಂತರಾಗುವ ಆಸೆ ಇದೆ.
- ತಮ್ಮ ಸ್ಪೇಸ್ ತಮಗೆ ಬೇಕು, ಸ್ವಾತಂತ್ರ್ಯ ಬೇಕು ಎಂದು ಸದಾ ಬಯಸುತ್ತಾರೆ.
- ಸಿಕ್ಕಾಪಟ್ಟೆ ಸೆನ್ಸಿಟಿವ್ ವ್ಯಕ್ತಿಗಳು, ಬೇಗ ಹರ್ಟ್ ಆಗುತ್ತಾರೆ.
- ಇದನ್ನು ಮಾಡಬೇಡ ಎಂದರೇ ಅದನ್ನೇ ಮಾಡುವ ಕ್ಯಾರೆಕ್ಟರ್.
- ಭಾವನಾತ್ಮಕ ಜೀವಿ, ಮನಸ್ಸಿನ ಮಾತುಗಳನ್ನು ಸರಳವಾಗಿ ಹೇಳುತ್ತಾರೆ.
- ಸ್ನೇಹಿತರನ್ನು ಮಾಡಿಕೊಳ್ಳೋದು ಇಷ್ಟ.
- ಹಠಮಾರಿ ಪ್ರವೃತ್ತಿ, ಯಾವುದಕ್ಕೂ ಹೆದರೋದಿಲ್ಲ.
- ಒಂದು ಕಡೆ ಕುಳಿತು ಕೆಲಸ ಮಾಡೋದು ಇಷ್ಟವಿಲ್ಲ, ತಮ್ಮಿಷ್ಟದ ಕೆಲಸವನ್ನೇ ಹುಡುಕಿ ಮಾಡ್ತಾರೆ. ಸಮಯ ಎಷ್ಟೇ ಆಗಲಿ.