ಪ್ರತೀ ತಿಂಗಳಿನಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಲಕ್ಷಣಗಳು ಇರುತ್ತವೆ. ಯಾವುದೇ ವ್ಯಕ್ತಿಯ ಗುಣಗಳನ್ನು ಅರಿಯಲು ಇದು ನಿಮಗೆ ಸಹಾಯವಾಗಬಹುದು, ಈ ತಿಂಗಳಲ್ಲಿ ಹುಟ್ಟಿದವರಿಗೆ ಇತರರ ಭಾವನೆಗಳ ಬಗ್ಗೆ ಹೆಚ್ಚು ಗಮನ ಇರುತ್ತದೆಯಂತೆ, ನೋವಾಗದಿರಲಿ ಎನ್ನುವಂತೆಯೇ ಬದುಕುತ್ತಾರಂತೆ, ಯಾವೆಲ್ಲಾ ಗುಣಗಳಿವೆ ನೋಡಿ..
- ಇವರ ಜೊತೆ ಇದ್ರೆ ಬೋರ್ ಆಗೋದಿಲ್ಲ, ಸದಾ ಎಂಟರ್ಟೈನ್‌ಮೆಂಟ್ ಪಕ್ಕಾ.
- ಸದಾ ಅನಿಸಿದ್ದನ್ನೇ ಹೇಳುವ ಗುಣ, ಇವರನ್ನು ಹಾಯಾಗಿ ನಂಬಹುದು.
- ಸ್ನೇಹಜೀವಿಗಳು, ಸ್ನೇಹಿತರೆಂದರೆ ಪ್ರೀತಿ ಹಾಗಾಗಿ ಸ್ನೇಹಿತರ ಸಂಖ್ಯೆಯೂ ಹೆಚ್ಚು.
- ಮುಖ ನೋಡಿದಾಗ ಹೋಗಿ ಮಾತನಾಡಿಸೋಣ ಎನಿಸುವ ವ್ಯಕ್ತಿಗಳು, ಸದಾ ನಗುಮುಖ.
- ಸಿಟ್ಟು ಹೆಚ್ಚಿದೆ, ಆದ್ರೆ ಸಿಟ್ಟನ್ನು ಎಲ್ಲಿ ಬೇಕಿ ಅಲ್ಲಿ ಮಾತ್ರ ತಡೆಯುತ್ತಾರೆ.
- ಯಾರ ಮೇಲೂ ದ್ವೇಷ, ಹಠ ಸಾಧಿಸೋದಿಲ್ಲ.
- ಭಾವನಾತ್ಮಕ ಜೀವಿಗಳು, ಕೆಲವೊಮ್ಮೆ ಸೆಂಟಿಮೆಂಟಲ್ ಫೂಲ್ಸ್.
- ಎಷ್ಟೇ ದುಡ್ಡಿರಲಿ, ವಿದ್ಯೆಯಿರಲಿ ಇವರಲ್ಲಿ ವಿನಯ ಇದೆ, ಇತರರನ್ನೂ ಸಮವಾಗಿ ನೋಡುವ ಗುಣ ಇದೆ
- ಸದಾ ಹೆಚ್ಚು ಕೆಲಸ ಮಾಡ್ತಾರೆ, ಸ್ಮಾರ್ಟ್‌ವರ್ಕ್‌ಗಿಂತ ಹಾರ್ಡ್‌ವರ್ಕ್‌ನಲ್ಲಿ ನಂಬಿಕೆ ಇಡುತ್ತಾರೆ.
- ಒಬ್ಬಂಟಿಯಾಗಿರೋಕೆ ಇಷ್ಟ, ಒಬ್ಬರೇ ಕಾಲ ಕಳೆಯೋದು ನೆಚ್ಚಿನ ಹಾಬಿ.
- ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಮೌನಿಗಳಾಗ್ತಾರೆ, ಇವರ ಮೌನ ಸಹಿಸಲಸಾಧ್ಯ.
- ಪ್ರೀತಿಯಿಂದ ಎಲ್ಲರನ್ನೂ ಕಾಣ್ತಾರೆ, ಹಾಗೆಯೇ ಪ್ರೀತಿಯನ್ನು ಅಪೇಕ್ಷಿಸುತ್ತಾರೆ.
- ಇವರನ್ನು ಕಂಡರೆ ಇವರಿಗೆ ತುಂಬಾ ಇಷ್ಟ, ತಮ್ಮನ್ನು ತಾವು ಹೊಗಳಿಕೊಳ್ಳೋದು, ಪ್ರೀತಿಸೋದು ಸದಾ ಇದ್ದದ್ದೇ.
- ಪ್ರೀತಿ ವಿಷಯದಲ್ಲಿ ಲಕ್ ಕಡಿಮೆ
- ಎಲ್ಲರನ್ನೂ ಕ್ಷಮಿಸುತ್ತಾರೆ, ಆದರೆ ಆದ ಮೋಸವನ್ನು ಮರೆಯೋದಿಲ್ಲ, ಮತ್ತೆ ಆ ವ್ಯಕ್ತಿ ಬಳಿ ಸುಳಿಯೋದಿಲ್ಲ.
- ಟ್ರಾವೆಲಿಂಗ್ ಇಷ್ಟ
- ದೇವರು, ಧ್ಯಾನ, ಭಕ್ತಿಯ ಮೇಲೆ ಗಮನ ಇದೆ
- ಇವರ ನಗು ಅತ್ಯಾಕರ್ಷಕ, ಜನರು ಇವರ ನಗುವಿಗೆ ಫ್ಯಾನ್ಸ್ ಆಗುತ್ತಾರೆ.
- ಇವರನ್ನು ನೋಯಿಸೋದು ತುಂಬಾನೇ ಸುಲಭ, ಮೂಡಿ ಕೂಡ ಹೌದು.
- ನಾನ್‌ಸೆನ್ಸ್ ಎನಿಸಿದ ವಿಷಯಗಳ ಬಗ್ಗೆ ಮಾತನಾಡದೆ ಎದ್ದು ಹೋಗ್ತಾರೆ, ಅವಶ್ಯಕತೆ ಇದ್ದಾಗ ಮಾತ್ರ ಬಾಯಿ ಬಿಚ್ಚುತ್ತಾರೆ.
- ಇವರ ನಡೆ ಸದಾ ನಿಗೂಢ
- ಇವರು ಸುಲಭವಾಗಿ ತಮ್ಮ ಪಾಸ್ಟ್‌ನ್ನು ಮರೆಯುವುದಿಲ್ಲ. ಪಾಸ್ಟ್‌ನ್ನು ತಮ್ಮ ಜೊತೆಯೇ ಇಟ್ಟುಕೊಂಡು ಮುನ್ನಡೆಯುವ ಜನರಿವರು.
- ಇವರನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವ ವ್ಯಕ್ತಿಗಳಲ್ಲ, ಮನಸ್ಸು ಹಾಳಾದಮೇಲೆ ಆ ದಾರಿಗೆ ಹೋಗೋದಿಲ್ಲ.
- ಹಠಮಾರಿ ಸ್ವಭಾವದವರು
- ಚುಚ್ಚುಮಾತು ಆಡೋದು ತುಂಬಾ ಸುಲಭ