ಹೊಸದಿಗಂತ ಬೀದರ್:
ಜಿಲ್ಲಾ ಕೇಂದ್ರದ ಆಸುಪಾಸಿನ ಗ್ರಾಮಗಳಲ್ಲಿ ಚಿರತೆ ಸಂಚಾರ ದೃಢಪಟ್ಟಿದ್ದು, ಸಾರ್ವಜನಿಕರು ತೀವ್ರ ಜಾಗೃತಿ ವಹಿಸಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚಿರತೆ ಭೀತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಈಗಾಗಲೇ ಹಳ್ಳಿಗಳಲ್ಲಿ ಡಂಗೂರ ಬಾರಿಸುವ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದು, ಗ್ರಾಮ ಸಭೆಗಳನ್ನು ನಡೆಸಿ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಅಷ್ಟೇ ಅಲ್ಲದೆ, ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಹಚ್ಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಪ್ರಮುಖ ಸೂಚನೆಗಳು:
ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಚಿರತೆ ಸಂಚಾರ ಹೆಚ್ಚಿರುವುದರಿಂದ ಈ ವೇಳೆ ಹೆಚ್ಚು ಎಚ್ಚರಿಕೆ ಅಗತ್ಯ.
ಸಂಜೆ ಮೇಲೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬಿಡಬೇಡಿ.
ರಾತ್ರಿ ವೇಳೆ ಓಡಾಡುವಾಗ ಕಡ್ಡಾಯವಾಗಿ ಟಾರ್ಚ್ ಅಥವಾ ಮೊಬೈಲ್ ಲೈಟ್ ಬಳಸಿ.
ಕೊಟ್ಟಿಗೆಗಳು ಮುಚ್ಚಿದಂತಿರಲಿ ಮತ್ತು ಜಾನುವಾರುಗಳ ಹತ್ತಿರ ಬೆಳಕಿನ ವ್ಯವಸ್ಥೆ ಇರಲಿ.
ನಿಮ್ಮ ಸುತ್ತಮುತ್ತ ಚಿರತೆ ಕಂಡುಬಂದಲ್ಲಿ ಕೂಡಲೇ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ:
| ಅಧಿಕಾರಿಗಳ ಹೆಸರು | ದೂರವಾಣಿ ಸಂಖ್ಯೆ |
| ವಿಜಯಕುಮಾರ ಜಾಧವ (RFO) | 9591317807 |
| ರವಿ (DRFO) | 9900561007 |
| ಆರ್.ಎಲ್.ರಾಠೋಡ (DRFO) | 8618002638 |
| ಪರಶುರಾಮ (ಬೀಟ್ ಫಾರೆಸ್ಟರ್) | 9845112328 |
| ಅರಣ್ಯ ಇಲಾಖೆ ಸಹಾಯವಾಣಿ | 1926 |


