July 26, 2026
Sunday, July 26, 2026
spot_img

ಅತಿಯಾದ ಬಿಸಿಲಿಗೆ ಕಂಗಾಲಾದ ಕಲಬುರಗಿ ಜನತೆ: 45 ಡಿಗ್ರಿ ತಲುಪಿದ ತಾಪಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ಅತಿಯಾದ ಉಷ್ಣಾಂಶ ದಾಖಲಾಗಿದೆ. ಅದರಲ್ಲಿಯೂ ಕಲಬುರಗಿಯ ಜನ ಬಿಸಿಲಿನಿಂದ ಹೈರಾಣಾಗಿದ್ದಾರೆ. ಏಪ್ರಿಲ್ 15ರಂದು ಕಲಬುರಗಿಯ ಔರಾದ್ ಹೋಬಳಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಕಲಬುರಗಿಯಲ್ಲಿ ಅತಿ ಹೆಚ್ಚು ಬಿಸಿಲಿರುವ ಕಾರಣ ಸದ್ಯ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯಷ್ಟೇ ಅಲ್ಲದೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಚಿಂಚೋಳಿ ತಾಲೂಕಿನ ಐನಾಪುರ ಹೋಬಳಿಮತ್ತು ಅಫಜಲ್ಪುರ ತಾಲೂಕಿನ ಅತನೂರು ಹೋಬಳಿಗಳಲ್ಲಿ ತಲಾ 44.3 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ಆಳಂದ ತಾಲೂಕಿನ ಮದನ ಹಿಪ್ಪರಗಾ ಹೋಬಳಿಯಲ್ಲಿ 44.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಇನ್ನೂ ನಾಲ್ಕು ದಿನ ಇದೇ ಬಿಸಿಲಿನ ಅಲೆ ಮುಂದುವರಿದಿದ್ದು, ಜನರ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ನೀರು ಕುಡಿಯುವುದು, ಹೊರಗೆ ಹೋಗುವುದನ್ನು ತಪ್ಪಿಸುವುದು, ಮಧ್ಯಾಹ್ನ ಕೆಲಸ ನಿಲ್ಲಿಸುವುದು ಉತ್ತಮವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !