ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವ ಕುರಿತು ಜನಾಗ್ರಹ, ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಂಡಿದೆ.
ನಡುಗುವ ಚಳಿಯ ನಡುವೆಯೂ, ಜನರು ಬೀದಿಗಳಲ್ಲಿ ಜಮಾಯಿಸಿ, ಅಂಗಡಿಗಳನ್ನು ಮುಚ್ಚಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜಂಟಿಯಾಗಿ ಪ್ರತಿಭಟನೆ ಸಾರಥ್ಯ ವಹಿಸಿದ್ದು, ಆರನೇ ಸಾಂವಿಧಾನಿಕ ಯೋಜನೆ, ಸಂವಿಧಾನ ರಕ್ಷಣಾ ಕಾರ್ಯಾಲಯದ ಆಧಾರದಲ್ಲಿ ಸರಕಾರ ರಚನೆಗೆ ಒತ್ತಾಯ ಮತ್ತಷ್ಟು ಹೆಚ್ಚುತ್ತಿದೆ.
ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್‌ನ ಪ್ರತಿನಿಧಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸುವುದಾಗಿ ಕೇಂದ್ರದ ಘೋಷಣೆಯ ಹೊರತಾಗಿಯೂ ರಾಜ್ಯದಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಈ ನಡುವೆ ಲಡಾಖ್ ಜನರ ಬೇಡಿಕೆಗಳನ್ನು ಪರಿಶೀಲಿಸಲು ಕೇಂದ್ರ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದಲ್ಲಿ ಕೇಂದ್ರವು ಈಗಾಗಲೇ ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದು, ಇದರ ನಡುವೆಯೂ ಪ್ರತಿಭಟನೆಯ ಕಾವು ಹೆಚ್ಚಳವಾಗುತ್ತಿದೆ.