Sunday, November 16, 2025

ಸಿಲಿಕಾನ್ ಸಿಟಿ ಜನರೇ ಗಮನಿಸಿ…ಎಲ್ಲೆಂದರಲ್ಲಿ ಕಸ ಸುಟ್ಟರೆ ಕ್ರಿಮಿನಲ್ ಪ್ರಕರಣ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಮುಂದಾಗಿದ್ದು, ಇನ್ನು ಮುಂದೆ ಎಂಜಿನಿಯರ್‌ಗಳು, ಮಾರ್ಷಲ್‌ಗಳು ಮತ್ತು ಜೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್‌ಗಳಿಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಸಂಸ್ಥೆ ಅಧಿಕಾರ ನೀಡುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಹೇಳಿದ್ದಾರೆ.

ಕಸವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅದನ್ನು ಸುಟ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ, ಜನರು ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ಸುಟ್ಟರೆ ಅದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಕಸವನ್ನು ಸುಡುವ ವೀಡಿಯೊಗಳನ್ನು ಹಂಚಿಕೊಳ್ಳಲುವಂತೆ ಜನರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ನಿಮಯ ಉಲ್ಲಂಘಿಸುವವರ ವಿರುದ್ಧ ಘನತ್ಯಾಜ್ಯ ನಿರ್ವಹಣಾ (SWM) ನಿಯಮಗಳು, 2016 ಪರಿಸರ ಸಂರಕ್ಷಣಾ ಕಾಯ್ದೆ, ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1981 ರ ಸೆಕ್ಷನ್ 19 (5) ಮತ್ತು ಇತರ ಸಂಬಂಧಿತ ಕಾಯ್ದೆಗಳು ಮತ್ತು ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಶನಿವಾರ ಬಿಎಸ್‌ಡಬ್ಲ್ಯೂಎಂಎಲ್ ತಂಡವು ಕೆಲವು ಮಾರ್ಷಲ್‌ಗಳೊಂದಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಭಾರತ್ ನಗರದಲ್ಲಿ ಕಸವನ್ನು ಸುಟ್ಟಿದ್ದಕ್ಕಾಗಿ ನಿವಾಸಿಯನ್ನು ಹಿಡಿದು 10,000 ರೂ.ಗಳ ದಂಡ ವಿಧಿಸಿದೆ.

ನಿಯಮ ಉಲ್ಲಂಘಿಸುವವರಿಗೆ ಪರಿಸರ ಸಂರಕ್ಷಣಾ ಕಾಯ್ದೆ, 1986 ರ ಅಡಿಯಲ್ಲಿ 1 ಲಕ್ಷ ರೂ.ಗಳ ದಂಡ ಅಥವಾ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ, ಇದನ್ನು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕಿನ ಭಾಗವೆಂದು ಗುರುತಿಸಲಾಗಿದೆ ಎಂದು ಹಿರಿಯ ಪರಿಸರ ಎಂಜಿನಿಯರ್ ಹೇಳಿದ್ದಾರೆ.

ಘನತ್ಯಾಜ್ಯವನ್ನು ಕೆಲವು ಸ್ಥಳಗಳಲ್ಲಿ ಸುಡಲಾಗುತ್ತಿದೆ. ಈ ನಿಟ್ಟಿನಲ್ಲಿ ಗಂಭೀರ ಕ್ರಮ ತೆಗೆದುಕೊಂಡರೆ, ಅದು ಕಡಿಮೆಯಾಗುತ್ತದೆ. ಮೊದಲಿಗೆ, ಕಸ ಸುಡುವ ಜನರ ವಿರುದ್ಧ ಭಾರಿ ದಂಡ ವಿಧಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

error: Content is protected !!