March 26, 2026
Thursday, March 26, 2026
spot_img

ವಾರ್‌ ಎಫೆಕ್ಟ್‌ | ಇಂಧನ ಬೆಲೆ ಏರಿಕೆ ಭೀತಿಯಲ್ಲಿ ಪೆಟ್ರೋಲ್‌ ಬಂಕ್‌ ಎದುರು ಕ್ಯೂ ನಿತ್ತ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌-ಇಸ್ರೇಲ್‌ ಯುದ್ಧ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ಆಗಬಹುದು ಎಂದು ಜನರು ಪೆಟ್ರೋಲ್‌ ಬಂಕ್‌ ಮುಂದೆ ಕ್ಯೂ ನಿಂತು ಫುಲ್‌ ಟ್ಯಾಂಕ್‌ ಮಾಡಿಸಿಕೊಳ್ಳುತ್ತಿದ್ದಾರೆ.

ಪೆಟ್ರೋಲ್‌ ಸ್ಥಗಿತವಾದರೆ ಅಥವಾ ದುಬಾರಿಯಾದರೆ ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಜನ ಈಗಲೇ ಪೆಟ್ರೋಲ್‌ ತುಂಬಿಸಿಕೊಳ್ಳುತ್ತಿದ್ದಾರೆ.

ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಗಾಡಿಗೆ ಮಾತ್ರ ಪೆಟ್ರೋಲ್‌ ಹಾಕುತ್ತಿದ್ದು, ಕ್ಯಾನ್‌ಗೆ ಪೆಟ್ರೋಲ್‌ ನೀಡುತ್ತಿಲ್ಲ. ಇನ್ನು ಹಲವು ಕಡೆ ಈಗಾಗಲೇ ನೋ ಸ್ಟಾಕ್‌ ಬೋರ್ಡ್‌ ಕೂಡ ಕಾಣಿಸಿದೆ .ಜಾಗತಿಕ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಬಹುದು ಹಾಗೂ ಇಂಧನ ಬೆಲೆ ಏರಿಕೆಯಾಗಬಹುದು ಎಂಬ ವರದಿಗಳಿಂದ ಜನರು ಆತಂಕಗೊಂಡು ಪೆಟ್ರೋಲ್ ಸಂಗ್ರಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಪೆಟ್ರೋಲ್ ಬಂಕ್ ಸಿಬ್ಬಂದಿ ಇಂಧನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !