CINE | ನಟಿಯರ ಜೊತೆ ಸಾಲು ಸಾಲು ಜನ ಬರ್ತಾರೆ, ಸ್ಟಾರ್‌ಗಳ ವಿರುದ್ಧ ನಿರ್ಮಾಪಕರ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟಿಯರ ಸಂಭಾವನೆ ಸಿಕ್ಕಾಪಟ್ಟೆ ದುಬಾರಿಯಾಗಿದೆ, ಅದರಲ್ಲಿಯೂ ಸೆಟ್‌ಗಳಲ್ಲಿ ಅವರ ಮೇಂಟೇನೆನ್ಸ್‌ ಹಣ ಇನ್ನೂ ಹೆಚ್ಚಾಗಿದೆ. ಈ ಬಗ್ಗೆ ನಿರ್ಮಾಪಕರು ಸಿಟ್ಟಿಗೆದ್ದಿದ್ದು, ನಿರ್ಮಾಪಕರ ಒಕ್ಕೂಟಕ್ಕೆ ದೂರು ನೀಡಿದ್ದಾರೆ.

ನಟಿಯರು ಸೆಟ್‌ಗೆ ಒಬ್ಬರು ಅಥವಾ ಇಬ್ಬರು ಬರೋದಿಲ್ಲ. ಜೊತೆಗೆ ಹತ್ತಕ್ಕೂ ಹೆಚ್ಚು ಮಂದಿಯನ್ನು ಕರೆತರುತ್ತಾರೆ. ಮೇಕಪ್​ಗೆ ಪ್ರತ್ಯೇಕ ಸಿಬ್ಬಂದಿ, ಸೋಷಿಯಲ್ ಮೀಡಿಯಾ ಸಿಬ್ಬಂದಿ, ಕೇಶ ವಿನ್ಯಾಸಕರು, ಮ್ಯಾನೇಜರ್, ಸಹಾಯಕ-ಸಹಾಯಕಿ, ಡಯಟೀಶಿಯನ್, ಟ್ಯಾಲೆಂಟ್ ಏಜೆನ್ಸಿ ಹೀಗೆ ಪ್ರತಿದಿನವೂ ಇಷ್ಟೊಂದು ಜನ ಅವರಿಗೆ ಕೂರಲು ಸ್ಥಳ, ಊಟ, ಉಪಚಾರ ಎಲ್ಲ ಹಣವನ್ನೂ ನಿರ್ಮಾಪಕರ ತಲೆಗೆ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ನಂತರದ ಅಗ್ರೀಮೆಂಟ್‌ಗಳಲ್ಲಿ ತಮ್ಮ ಜೊತೆ ಎಷ್ಟು ಜನರನ್ನು ಕರೆ ತರಬೇಕು ಎನ್ನುವ ಬಗ್ಗೆಯೂ ಬರೆಯುವ ಬಗ್ಗೆ ನಿರ್ಮಾಪಕರು ನಿರ್ಣಯ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!