ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ ಆಚರಣೆ, ಹೂವು, ಹಣ್ಣುಗಳ ಬೆಲೆ ಹೆಚ್ಚಳ ಮಧ್ಯೆ ಖರೀದಿಗೆ ಮುಗಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಹೀಗಾಗಿ ನಗರದ ಬಹುತೇಕ ಮಾರುಕಟ್ಟೆಗಳತ್ತ ಜನಸಾಗರವೇ ಹರಿದು ಬರುತ್ತಿದ್ದು, ತರಕಾರಿ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಳ ಮಧ್ಯೆಯೂ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಕಳೆದ ವಾರಕ್ಕಿಂತ ಈ ವಾರ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ.

ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಭ. ಹೀಗಾಗಿ, ಹೂವು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್​ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಅಗತ್ಯ ವಸ್ತುಗಳು ಖರೀದಿಸಿದರು. ಹಬ್ಬದ ಕಾರಣ ಹೂವು, ಹಣ್ಣುಗಳ ಬೆಲೆ ಡಬ್ಬಲ್ ಆಗಿದೆ. ಪ್ರಮುಖ ಹಣ್ಣು, ತರಕಾರಿ ಹಾಗೂ ಹೂವಿನ ಬೆಲೆ ಇಂತಿದೆ..

  • ಹುರುಳಿಕಾಯಿ 150 ರೂ
  • ಕ್ಯಾಪ್ಸಿಕಂ 80 ರೂ
  • ಬೀನ್ಸ್ ‌‌‌‌‌ 80 ರೂ
  • ಬದನೆಕಾಯಿ 60 ರೂ
  • ಹೂಕೋಸು 30 ರೂ
  • ತೊಂಡೆಕಾಯಿ ‌‌‌ 45 ರೂ.
  • ಸೇಬು 300 ರೂ
  • ದಾಳಿಂಬೆ 280 ರೂ
  • ಕಿತ್ತಳೆ 200 ರೂ
  • ಮೂಸಂಬಿ 150 ರೂ
  • ಸಪೋಟ 150 ರೂ
  • ದ್ರಾಕ್ಷಿ 200 ರೂ
  • ಸೀತಾಫಲ 200 ರೂ
  • ಕನಕಾಂಬರ 1600 ರೂ
  • ಮಲ್ಲಿಗೆ, ಮಳ್ಳೆ ಹೂವು 900 ರೂ
  • ಕಾಕಡ 800 ರೂ
  • ಸೇವಂತಿಗೆ 800 ರೂ
  • ಗುಲಾಬಿ 500 ರೂ
  • ಕಣಗಲೆ 500 ರೂ
  • ಸುಗಂಧರಾಜ 500 ರೂ
  • ತಾವರೆ (ಜೋಡಿಗೆ) 150 ರೂ
  • ಜೋಡಿ ಬಾಳೆಕಂದು 80 ರೂ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!