ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಜನರ ನಿದ್ದೆಗೆಡಿಸಿದೆ. ಪರಿಣಾಮವಾಗಿ ಹೃದಯದ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.
ಚೆಕಪ್ಗೆಂದು ಆಸ್ಪತ್ರೆಗೆ ಬರುವ ಜನರನ್ನು ನಿಯಂತ್ರಿಸುವುದೇ ವೈದ್ಯಕೀಯ ಸಿಬ್ಬಂದಿಗೆ ಸವಾಲಾಗುತ್ತಿದೆ. ಮೈಸೂರಿನ ಜಯದೇವ ಆಸ್ಪತ್ರೆಗೆ ಬುಧವಾರ ಬೆಳ್ಳಂಬಳಗ್ಗೆಯೇ ಸಾವಿರಾರು ಜನ ಆಗಮಿಸಿದ್ದಾರೆ. ಆತಂಕ ಬೇಡ ಎಂದು ವೈದ್ಯರು ಹೇಳಿದ್ದರೂ ಸಾವಿರಾರು ಜನರು ಆಸ್ಪತ್ರೆ ಹೊರಗೆ ಸಾಲುಗಟ್ಟಿ ನಿಂತಿದ್ದಾರೆ.
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದೊಂದು ವಾರದಿಂದ 2 ಸಾವಿರಕ್ಕೂ ಅಧಿಕ ಜನ ನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಪ್ರತಿ ದಿನ 700 ರಿಂದ 1 ಸಾವಿರ ಜನ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದರು. ಇದೀಗ 2 ಸಾವಿರಕ್ಕೂ ಅಧಿಕ ಜನ ಬರುತ್ತಿದ್ದಾರೆ.