ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಜಲಾಂತರ್ಗಾಮಿಯಲ್ಲಿದ್ದ ಜನರು ಜಲಸಮಾಧಿಯಾಗಿದ್ದಾರೆ.
ಪೈಲಟ್ ಹಾಗೂ ನಾಲ್ವರು ಮಹಾಸಾಗರದಲ್ಲಿ ಜಲಸಮಾಧಿಯಾಗಿದ್ದಾರೆ. ಪಾಕಿಸ್ತಾನದ ಬಿಲೇನಿಯರ್ ಉದ್ಯಮಿ ಶಹಜಾದ್ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್, ಬ್ರಿಟನ್ನ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್ ಹಾಗೂ ಪಾಲ್ ಹೆನ್ರಿ ಎನ್ನುವವರು ಮೃತಪಟ್ಟಿದ್ದಾರೆ.
ಮೂರು ನಾಲ್ಕು ದಿನಗಳಿಂದ ಕೆನಡಾ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ನಿನ್ನೆಯಷ್ಟೇ ಜಲಾಂತರ್ಗಾಮಿಯ ಸುಳಿವು ಕಾಣಿಸಿತ್ತು. ಆದರೆ ಇದೀಗ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿದ್ದು, ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಜಲಾಂತರ್ಗಾಮಿಯಲ್ಲಿ ಆಮ್ಲಜನಕ ವ್ಯವಸ್ಥೆಯಿತ್ತು. ಆದರೆ ಅದು ನಿನ್ನೆ ಸಂಜೆ ಏಳು ಗಂಟೆಯವರೆಗೆ ಸಾಕಾಗುಷ್ಟು ಮಾತ್ರ ಇತ್ತು. ಆದಕಾರಣ ಎಲ್ಲರೂ ಜಲಸಮಾಧಿಯಾಗಿದ್ದಾರೆ ಎನ್ನಲಾಗಿದೆ.
ಕೆನಡಾದ ನ್ಯೂಫೌಂಡ್ಲ್ಯಾಂಡ್ನ ಕರಾವಳಿಯಿಂದ 400 ಮೈಲಿ ದೂರದಲ್ಲಿ ಟೈಟಾನಿಕ್ ಹಡಗುಗಳ ಅವಶೇಷಗಳಿವೆ. ಇದನ್ನು ನೋಡೋದಕ್ಕೆ ಪ್ರವಾಸಿಗರು ಎರಡೂ ಕೋಟಿ ರೂಪಾಯಿಗೂ ಹೆಚ್ಚು ಹಣ ಪಾವತಿ ಮಾಡಿರುತ್ತಾರೆ. ಈ ಜಲಾಂತರ್ಗಾಮಿಯಲ್ಲಿ ಒಟ್ಟಾರೆ 98 ಗಂಟೆಗಳ ಆಕ್ಸಿಜನ್ ಸಪ್ಲೇ ಇರುತ್ತದೆ.