‘ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್’: ಕಾಶ್ಮೀರದಲ್ಲಿ ಹೊಸ ರಾಜಕೀಯ ಮೈತ್ರಿಕೂಟ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಶ್ಮೀರದಲ್ಲಿ ಮೂರು ಪ್ರಾದೇಶಿಕ ರಾಜಕೀಯ ಪಕ್ಷಗಳು ‘ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್’ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ರಚಿಸಿದೆ.

ಈ ಮೈತ್ರಿಕೂಟದಲ್ಲಿ ಶಾಸಕ ಸಜ್ಜದ್ ಗನಿ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್, ಮಾಜಿ ಶಾಸಕ ಹಕೀಮ್ ಮೊಹಮ್ಮದ್ ಯಾಸಿನ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್(ಪಿಡಿಎಫ್) ಮತ್ತು ಈಗ ನಿಷೇಧಿತ ಜಮಾತ್-ಇ-ಇಸ್ಲಾಮಿಯ ಮಾಜಿ ಸದಸ್ಯರನ್ನು ಒಳಗೊಂಡ ಹೊಸದಾಗಿ ರಚಿಸಲಾದ ರಾಜಕೀಯ ಪಕ್ಷ ಜಸ್ಟೀಸ್ & ಡೆವಲಪ್‌ಮೆಂಟ್ ಫ್ರಂಟ್(ಜೆಡಿಎಫ್) ಸೇರಿವೆ.

ಇಂದು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಫ್ ಅಧ್ಯಕ್ಷ ಶಮೀಮ್ ಅಹ್ಮದ್ ಥೋಕರ್ ಈ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾಮೂಹಿಕವಾಗಿ ಕೆಲಸ ಮಾಡುವ ಗುರಿಯನ್ನು ಮೈತ್ರಿಕೂಟ ಒತ್ತಿ ಹೇಳಿದರು.

ಜನರಿಗೆ ಸೇವೆ ಸಲ್ಲಿಸಲು ನಾವು ಒಂದಾಗಬೇಕು. ಈ ಪ್ರದೇಶದಲ್ಲಿ ರಾಜಕೀಯ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.

ಈ ಮೈತ್ರಿಕೂಟವು 370ನೇ ವಿಧಿ, 35A ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಬದ್ಧವಾಗಿದೆ. ಇದು ಆರಂಭ, ಅಂತ್ಯವಲ್ಲ. ಹೊಸ ಮೈತ್ರಿಕೂಟ ರಚನೆಯಾಗಿದೆ. ಬದಲಾವಣೆಗಾಗಿ ನಮ್ಮೊಂದಿಗೆ ಸೇರುವಂತೆ ನಾವು ಇತರ ಸಮಾನ ಮನಸ್ಕ ಪಕ್ಷಗಳನ್ನು ಸಂಪರ್ಕಿಸುತ್ತೇವೆ. ಈ ವೇದಿಕೆಯು ನೋವು ಸಹಿಸಿಕೊಂಡವರನ್ನು ಒಂದುಗೂಡಿಸಲು ಮತ್ತು ನೋವು ಉಂಟುಮಾಡಿದವರನ್ನು ಹೊರಗಿಡಲು ಯತ್ನಿಸುತ್ತದೆ ಎಂದರು.

ಮೂರು ಪಕ್ಷಗಳ ನಾಯಕರು ‘ಪೀಪಲ್ಸ್ ಅಲೈಯನ್ಸ್ ಫಾರ್ ಚೇಂಜ್’ ಎಂಬ ಶೀರ್ಷಿಕೆಯ ಮೈತ್ರಿಕೂಟದ ಸ್ಥಾಪಕ ದಾಖಲೆಯನ್ನು ಬಿಡುಗಡೆ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!