ಹೊಸದಿಗಂತ ವರದಿ, ಬೀದರ್:
ವಿಶ್ವಕ್ಕೆ ಮಾದರಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರಕಾರ ರಚಿಸಲಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿಜೆಪಿ ಮುಖಂಡ ಆರ್.ಅಶೋಕ ಹೇಳಿದರು.
ಅವರು ಇಂದು ನಗರದಲ್ಲಿ ಜಿಲ್ಲಾ ಪತ್ರಿಕಾ ಭವನ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಪ್ರಧಾನಿ ಅಭ್ಯರ್ಥಿ ಯಾರೆಂದು ಗೊತ್ತಿಲ್ಲದೇ ಛಿದ್ರವಾಗಿರುವ ವಿರೋಧ ಪಕ್ಷದ ನಾಯಕರು ದೇಶಕ್ಕೆ ಸದೃಢ ಆಡಳಿತ ನೀಡಲು ಅಸಾಧ್ಯ. ಕ್ರಿಕೆಟ್ ಗ್ರೌಂಡ್ ನಲ್ಲಿ ಅಂಪೈರ್ ಇದ್ದಾರೆ ಬ್ಯಾಟಿಂಗ್ ಮಾಡಿಲು ಮೋದಿ ಇದ್ದಾರೆ , ಆದರೆ ಬೌಲಿಂಗ್ ಮಾಡಲು ವಿರೋಧ ಪಕ್ಷದವರೇ ಇಲ್ಲ ಎಂದು ಹೇಳಿದರು.
೧೯೫೭ರ ಚುನಾವಣೆಯಲ್ಲಿ ಜನಸಂಘ ಬರಿ ೪ ಸ್ಥಾನ ಪಡೆದಿತ್ತು, ಕಾಂಗ್ರೆಸ್ 371 ಗೆದ್ದಿತ್ತು, ೬೭ ವರ್ಷಗಳ ನಂತರ ಇತಿಹಾಸ ಬದಲಾಗಲಿದೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ೪೦೦ ಸ್ಥಾನ ಗಳಿಸಲಿದೆ. ದೇಶದ ಜನರಿಗೆ ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಅಭಿವೃದ್ಧಿ ಪಥದ, ಸರ್ವ ಜನಹಿತಾಯ ಸರ್ಕಾರ ನೀಡಿ ವಿಶ್ವಕ್ಕೆ ಮಾದರಿ ಎನಿಸಿರುವ ಪ್ರಧಾನಿ ಮೋದಿ ಅವರ ಗ್ಯಾರಂಟಿ ಮೇಲೆ ದೇಶದ ಜನರ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಥವಾ ದೇಶದ ಅಭಿವೃದ್ಧಿ ಆಗದು. ೬೫ ವರ್ಷಗಳ ಕಾಲ ದೇಶದ ಅಭಿವೃದ್ಧಿಯನ್ನು ಕಾಂಗ್ರೆಸ್ ತನ್ನ ನೀತಿಗಳಿಂದ ತಡೆಹಿಡಿದಿತ್ತು, ದಿನಬೆಳಗಾದರೆ ಬಾಂಬ್ ಬ್ಲಾಸ್ಟ್, ಭಯೋತ್ಪಾದಕರ ದಾಳಿಯ ಸುದ್ದಿ ಇವೇ ಕಾಂಗ್ರೆಸ್ ಆಡಳಿತದ ದೇಣಿಗೆ. ಈಗ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಬೆಂಗಳೂರಿನ ಪ್ರಸಿದ್ಧ ಹೊಟೇಲ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು ಅಶಾಂತಿಯ ವಾತಾವರಣ ಕಾಂಗ್ರೆಸ್ ನ ಕೊಡುಗೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಲೆಲ್ಲ ರಾಜ್ಯದಲ್ಲಿ ಬರ ಖಚಿತ, ಇದೀಗ ರಾಜಧಾನಿ ಬೆಂಗಳೂರು ನಗರ ಸಹಿತ ರಾಜ್ಯದ ಅನೇಕ ಕಡೆ ಬರ ಸ್ಥಿತಿ ಇದೆ, ಕಾಂಗ್ರೆಸ್ ಶಾಸಕರು ಬರ ಪರಿಸ್ಥಿತಿ ನಿಭಾಯಿಸಲು ಅನುದಾನ ಇಲ್ಲದೇ ಒದ್ದಾಡುತ್ತಿರುವ ಸ್ಥಿತಿ ಇದೆ, ಖಾತ್ರಿ ಯೋಜನೆಗಳಿಗೆ ಲಕ್ಷ ಕೋಟಿ ಹಣ ಖರ್ಚಾಗಿದ್ದು ಚುನಾವಣೆಯ ವರೆಗೆ ಮಾತ್ರ ರಾಜ್ಯ ಸರ್ಕಾರದ ಬಳಿ ಅನುದಾನ ಇದ್ದು, ಲೋಕಸಭೆ ಚುನಾವಣೆ ನಂತರ ದಿವಾಳಿ ಇದು ಖಚಿತದ ಪ್ರಭಾವ ಎಂದು ತಿವಿದರು.
ಜಿ.ಪರಮೇಶ್ವರ, ಡಿಕೆ ಶಿವಕುಮಾರ್, ಜಾರಕಿಹೊಳಿ ಹಾಗೂ ಸಿಎಂ ಸಿದ್ದರಾಮಯ್ಯ ಹೀಗೆ ಆಂತರಿಕ ಬಣ ರಾಜಕೀಯದ ಪರಿಣಾಮ ಕಾಂಗ್ರೆಸ್ ನಲ್ಲಿ ಬಿರುಕು ಬಿಟ್ಟಿದೆ, ಲೋಕಸಭೆ ಚುನಾವಣೆ ನಂತರ ಆಂತರಿಕ ಕಲಹದಿಂದ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಸರ್ಕಾರ ಹೋಗುವುದು ಖಚಿತ, ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಹಾಗೂ ಸಂಸದ ಭಗವಂತ ಖೂಬಾ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಹುಮನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್ ಸೇರಿದಂತೆ ಜಿಲ್ಲಾ ಬಿಜೆಪಿ ಘಟಕದ ಪ್ರಮುಖರು ಉಪಸ್ಥಿತರಿದ್ದರು.
ivella gimics vidhana sabheli yake gellilla tadi yedurappa,sadananda gowda,jagadeesh shetter hdk cm agiddaga bara iralillava