ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಆರಂಭಿಸಿರುವ ದಂಡ ಪಾವತಿಯಲ್ಲಿನ ಶೇ. 50 ರಷ್ಟು ರಿಯಾಯಿತಿಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ.
ರಿಯಾಯಿತಿ ಘೋಷಣೆಯಾದ ನಾಲ್ಕು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಲೇವಾರಿಯಾಗಿದ್ದು, 25.42 ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹ ಆಗಿದೆ.
ದಂಡ ಪಾವತಿ ಬಗ್ಗೆ ಮಾಹಿತಿ ನೀಡಿದ ಸಂಚಾರ ವಿಶೇಷ ಪೊಲೀಸ್ ಆಯುಕ್ತ ಎಂ.ಎ. ಸಲೀಂ, ಶೇ.50 ರಿಯಾಯಿತಿ ಘೋಷಣೆ ನಂತರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಾಹನ ಸವಾರರು ನಾಲ್ಕನೇ ದಿನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿಸುತ್ತಿದ್ದಾರೆ. 8 ಲಕ್ಷ 68 ಸಾವಿರ 405 ಪ್ರಕರಣಗಳ ವಿಲೇವಾರಿ ಆಗಿದೆ. 25 ಕೋಟಿ 42 ಲಕ್ಷ 52 ಸಾವಿರಕ್ಕೂ ಅಧಿಕ ಮೊತ್ತದ ದಂಡ ಸಂಗ್ರಹ ಆಗಿದೆ ಎಂದರು.
ಎರಡು ದಿನ ನೋಡಿಕೊಂಡು ಕಾಲಾವಧಿಯನ್ನ ವಿಸ್ತರಿಸುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಇನ್ನು 1.80 ಕೋಟಿ ಪ್ರಕರಣಗಳು ಬಾಕಿ ಇವೆ. ಸದ್ಯ 8 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದೆ ಎಂದರು.