PERIODS | ಬಾಯ್ಸ್! ಪಿರಿಯಡ್ಸ್ ಬಗ್ಗೆ ನಿಮಗೆಷ್ಟು ಗೊತ್ತು? ಈ ವಿಷಯಗಳನ್ನು ತಿಳಿದಿರಲೇಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿರಿಯಡ್ಸ್ ಅಥವಾ ಮುಟ್ಟು ಇದು ಶರೀರದ ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಹಾರ್ಮೋನಲ್ ಬದಲಾವಣೆಗಳು, ರಕ್ತಸ್ರಾವ, ಮತ್ತು ಮಾನಸಿಕ ತೊಳಲಾಟ ಸಂಭವಿಸುತ್ತವೆ. ಪಿರಿಯಡ್ಸ್ ವೇಳೆ ಅನುಭವಿಸುವ ಈ ತೊಂದರೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಹಿಳೆಯರಿಗೆ ಅಗತ್ಯವಾದ ಬೆಂಬಲ ನೀಡುವುದು ಪುರುಷರ ಜವಾಬ್ದಾರಿಯಾಗಿದೆ.

ಪಿರಿಯಡ್ಸ್ ಪೆಯಿನ್ : ಬಹುತೇಕ ಮಹಿಳೆಯರು ತಮ್ಮ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆನೋವು ಅನುಭವಿಸುತ್ತಾರೆ.

ಪಿರಿಯಡ್ಸ್ ಸೈಕಲ್: ಒಂದು ಪಿರಿಯಡ್ಸ್ ಮುಗಿದ ನಂತರ ಮತ್ತೊಂದು ಆರಂಭವಾಗುವವರೆಗೆ ಇರುವ ಅವಧಿಯನ್ನು ಮಾಸಿಕ ಚಕ್ರ ಅಥವಾ ಪಿರಿಯಡ್ಸ್ ಸೈಕಲ್ ಎಂದು ಕರೆಯುತ್ತಾರೆ.

ಪಿರಿಯಡ್ಸ್ ಹೈಜೀನ್: ಪಿರಿಯಡ್ಸ್ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ.

ಮೂಡ್ ಸ್ವಿಂಗ್ಸ್ : ಪಿರಿಯಡ್ಸ್ ಸಮಯದಲ್ಲಿ ಮಹಿಳೆಯ ಮಾತು ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆಗಳು ಸಹಜ.

ಬೆಂಬಲ: ಅವರಿಗೆ ಏನಾದರೂ ಬೇಕೇ ಎಂದು ಕೇಳುವುದು, ಹೀಟಿಂಗ್ ಪ್ಯಾಡ್ ಒದಗಿಸುವುದು, ಅಥವಾ ಮನೆ ಕೆಲಸದಲ್ಲಿ ಸಹಾಯ ಮಾಡುವುದನ್ನು ಮಾಡಿ.

ಮಾತುಕತೆ: ಪಿರಿಯಡ್ಸ್ ಬಗ್ಗೆ ಯಾವುದೇ ಮುಜುಗರವಿಲ್ಲದೆ ಮಾತನಾಡುವುದು, ಆರೋಗ್ಯಕರ ಚರ್ಚೆಗಳನ್ನು ನಡೆಸುವುದು ಉತ್ತಮ.

ಮಕ್ಕಳಿಗೆ ಪಿರಿಯಡ್ಸ್ ಬಗ್ಗೆ ಹೇಗೆ ಹೇಳುವುದು?

ಹುಡುಗರಿಗೆ ಬಾಲ್ಯದಲ್ಲಿಯೇ ಗಂಡಸರು ಮತ್ತು ಮಹಿಳೆಯರ ದೇಹದ ವ್ಯತ್ಯಾಸಗಳನ್ನು ಕಲಿಸಿ.
ದಿನನಿತ್ಯದ ಸಂದರ್ಭಗಳನ್ನು ಬಳಸಿಕೊಂಡು ಪಿರಿಯಡ್ಸ್ ಬಗ್ಗೆ ಮಾತುಕತೆ ನಡೆಸಲು ಪ್ರಾರಂಭಿಸಿ. ಪ್ರತಿ ಸಲ ಸ್ವಲ್ಪ ಹೆಚ್ಚು ಮಾಹಿತಿಯನ್ನು ನೀಡುತ್ತಾ ಹೋಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here