ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ಅರವಣ ಪ್ರಸಾದ ಮಾರಾಟ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದಕ್ಕೆ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಕಂಡುಬಂದಿದ್ದು, ಪ್ರಸಾದ ಮಾರಾಟ ಮಾಡುವುದು ಬೇಡ ಎಂದು ಕೋರ್ಟ್ ಹೇಳಿದೆ.
ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಈಗಾಗಲೇ ತಯಾರಾಗಿ ಮಾರಾಟಕ್ಕೆ ಇಟ್ಟಿದ್ದ ಒಟ್ಟಾರೆ ಪ್ರಸಾದದ ಮೌಲ್ಯ ಆರೂವರೆ ಕೋಟಿ ರೂಪಾಯಿಗಳಾಗಿದೆ.
ಪ್ರಸಾದ ತಯಾರಿಸಲು ಏಲಕ್ಕಿ ಬಳಕೆ ಮಾಡಲಾಗುತ್ತದೆ. ಈ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ 14 ವಿಧದ ಕೀಟನಾಶಕಗಳು ಕಂಡುಬಂದಿದೆ. ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಅರ್ಜಿ ಸಲ್ಲಿಸಿದ ಹಿನ್ನೆಲೆ ಹೈ ಕೋರ್ಟ್ ಪರೀಕ್ಷೆಗೆ ಆದೇಶ ನೀಡಿತ್ತು.
ಈ ಬಗ್ಗೆ ದೇವಸ್ವಂ ಮಂಡಳಿ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ಎಲ್ಲಾ ಯಂತ್ರಗಳನ್ನು ಸ್ವಚ್ಛಗೊಳಿಸುತ್ತೇವೆ. ಏಲಕ್ಕಿ ಇಲ್ಲದೆ ಪಾಯಸ ತಯಾರಿಸುತ್ತೇವೆ. ಸಾವಯವ ಏಲಕ್ಕಿ ಸಂಗ್ರಹಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದೆ.