ಗೋಲ್ಡ್‌ಫಿಶ್‌ಗಳು ಸಾಮಾನ್ಯವಾಗಿ ಸಾಕುಪ್ರಾಣಿಗಳಾಗಿ ಇರಿಸಲಾಗುವ ಜನಪ್ರಿಯ ಮೀನುಗಳಾಗಿವೆ. ಗೋಲ್ಡ್‌ಫಿಶ್‌ಗಳು ತಮ್ಮ ಪ್ರಕಾಶಮಾನ ಬಣ್ಣ,ಮತ್ತು ಶಾಂತ ಸ್ವಭಾವದಿಂದ ಮನೆಗಳಲ್ಲಿ ಮನೆಗಳಲ್ಲಿ ಸಾಕಲು ಬಹಳಷ್ಟು ಜನ ಇಷ್ಟ ಪಡುತ್ತಾರೆ. ಈ ಮೀನುಗಳನ್ನು ಸಾಕುವುದು ಸುಲಭ ಎನಿಸಬಹುದು, ಆದರೆ ಅವುಗಳ ಆರೋಗ್ಯ ಮತ್ತು ಸಂತೋಷಕ್ಕಾಗಿ ಸರಿಯಾದ ಮಾಹಿತಿ ಮತ್ತು ಕೇರ್ ಅಗತ್ಯವಿದೆ.
ಸರಿಯಾದ ಅಕ್ವೇರಿಯಂ ಆಯ್ಕೆಮಾಡಿ
ಗೋಲ್ಡ್‌ಫಿಶ್‌ಗಳಿಗೆ ಹೆಚ್ಚು ಜಾಗವಿರುವ ಟ್ಯಾಂಕ್ ಅಗತ್ಯ. ಒಂದು ಗೋಲ್ಡ್‌ಫಿಶ್‌ಗೆ ಕನಿಷ್ಠ 20 ಲೀಟರ್ ನೀರು ಬೇಕು. ಬೌಲ್ ನಲ್ಲಿ ಇಡುವುದು ಮೀವುಗಳಿಗೆ ಒತ್ತಡ ಉಂಟುಮಾಡಬಹುದು ಮತ್ತು ಅವುಗಳ ಆಯುಷ್ಯ ಕಡಿಮೆಯಾಗಬಹುದು.
ನೀರಿನ ಗುಣಮಟ್ಟವನ್ನು ಕಾಪಾಡಿ
ನೀರಿನ ತಾಪಮಾನ 20°C ರಿಂದ 24°C ನಡುವೆ ಇರಬೇಕು. ಫಿಲ್ಟರ್ ಬಳಸಿ ನೀರಿನ ಶುದ್ಧತೆಯನ್ನು ಕಾಪಾಡುವುದು ಮತ್ತು ನಿಯಮಿತವಾಗಿ ನೀರನ್ನು ಬದಲಾಯಿಸುವುದು ಅಗತ್ಯ.
ಸಮತೋಲನಯುಕ್ತ ಆಹಾರ ನೀಡಿ
ಗೋಲ್ಡ್ ಫಿಷ್ ಕೇವಲ ಫಿಶ್‌ಫುಡ್‌ಗಳಿಗಿಂತ ಹೆಚ್ಚಿನದನ್ನು ತಿನ್ನುತ್ತವೆ. ಅವುಗಳು ಆರೋಗ್ಯವಾಗಿರಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಅವರಿಗೆ ಉಂಡೆಗಳು, ತರಕಾರಿಗಳು ಮತ್ತು ಬಟಾಣಿಗಳಂತಹ ಸಾಂದರ್ಭಿಕ ತಿನಿಸುಗಳನ್ನು ಒಳಗೊಂಡಂತೆ ವೈವಿಧ್ಯಮಯ ಆಹಾರದ ಅಗತ್ಯವಿದೆ.
ಆರೈಕೆ ಮತ್ತು ಆರೋಗ್ಯ ಪರೀಕ್ಷೆ ಮಾಡುತ್ತಿರಿ
ಮೀನುಗಳಲ್ಲಿ ಬದಲಾವಣೆಗಳು ಕಂಡುಬಂದರೆ (ಹೆಚ್ಚು ಆರಾಮವಾಗಿ ಈಜದಿರುವುದು, ದೇಹದ ಮೇಲೆ ಚುಕ್ಕೆಗಳು, ಇತ್ಯಾದಿ) ತಕ್ಷಣವೇ ಸೂಕ್ತ ಚಿಕಿತ್ಸೆಗೆ ಒಯ್ಯಬೇಕು. ಕಣ್ಣಿಗೆ ಕಾಣುವ ಬದಲಾವಣೆಗಳನ್ನು ಗಮನಿಸಿ.
ಸಾಂಗತ್ಯ ನೀಡಿ
ಗೋಲ್ಡ್‌ಫಿಶ್‌ಗಳು ಸಾಮಾನ್ಯವಾಗಿ ಸಾಮೂಹಿಕವಾಗಿ ಇರುವುದು ಉತ್ತಮ. ಆದರೆ ಅವರ ಜೊತೆಗೆ ಇರಬಹುದಾದ ಮೀನುಗಳ ಆಯ್ಕೆ ಜಾಣ್ಮೆಯಿಂದ ಮಾಡಬೇಕು. ಗೋಲ್ಡ್ ಫಿಷ್ ಶಾಂತಿಯುತವಾಗಿರುವ ಮೀನುಗಳೊಂದಿಗೆ ಮಾತ್ರ ಅವು ಹೊಂದಾಣಿಕೆಯಿಂದ ಇರಬಲ್ಲವು.
ಗೋಲ್ಡ್‌ಫಿಶ್ ಗಿದೆ ದೀರ್ಘಾವಧಿಯ ಜೀವಿತಾವಧಿ
ಗೋಲ್ಡ್‌ಫಿಶ್ ಅಲ್ಪಾವಧಿಯ ಸಾಕು ಪ್ರಾಣಿಗಳಲ್ಲ. ಅವುಗಳಿಗೆ ಸರಿಯಾದ ಕಾಳಜಿ ಮತ್ತು ಪೌಷ್ಟಿಕ ಆಹಾರ ನೀಡಿದರೆ ಅವು 10-15 ರಿಂದ ಸುಮಾರು 20 ವರ್ಷಗಳವರೆಗೆ ಬದುಕಬಲ್ಲವು.