ಮನೆ ಪ್ರಾಣಿಗಳು ನಮ್ಮ ಕುಟುಂಬದ ಸದಸ್ಯರಂತೆಯೇ. ಅವುಗಳಿಗೆ ನಾವು ಕೊಡುವ ಆಹಾರವು ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವೊಂದು ಮಾನವ ಆಹಾರಗಳು ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ, ಯಾವ ಆಹಾರಗಳನ್ನು ಅವರಿಂದ ದೂರವಿಡಬೇಕೆಂಬ ಜಾಗೃತಿಯು ಬಹಳ ಮುಖ್ಯ.
ಚಾಕೊಲೆಟ್:
ಚಾಕೊಲೆಟ್‌ನಲ್ಲಿ ‘ಥಿಯೋಬ್ರೋಮೈನ್’ ಮತ್ತು ಕೆಫೀನ್ ಇದ್ದು ಇದು ಪ್ರಾಣಿಗಳ ಆರೋಗ್ಯವನ್ನು ತೀವ್ರವಾಗಿ ಹಾನಿ ಮಾಡಬಹುದು. ಇದು ಹೃದಯದ ಬಡಿತವನ್ನು ಹೆಚ್ಚಿಸಬಹುದು ಮತ್ತು ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಈರುಳ್ಳಿ ಮತ್ತು ಬೆಳ್ಳುಳ್ಳಿ:
ಇದರಲ್ಲಿ ಥಿಯೋಸಲ್ಫೇಟ್ ಇದ್ದು ಇದು ರಕ್ತದ ಕಣಗಳನ್ನು ನಾಶಮಾಡಬಹುದು, ಜೊತೆಗೆ ಅನಿಮಿಯಾದಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ದ್ರಾಕ್ಷಿ:
ದ್ರಾಕ್ಷಿಗಳು ನಾಯಿಗಳಿಗೆ ಮೂತ್ರಪಿಂಡ ಸಮಸ್ಯೆ ಉಂಟುಮಾಡಬಹುದು. ಕೆಲವು ನಾಯಿಗಳಿಗೆ ಇವು ವಿಷದಂತೆ ಕೆಲಸ ಮಾಡಬಹುದು.
ಅಲ್ಕೋಹಾಲ್ (ಮದ್ಯ):
ಯಾವುದೇ ಪ್ರಮಾಣದ ಮದ್ಯವೂ ಪ್ರಾಣಿಗಳಿಗೆ ಅಪಾಯಕಾರಿ. ಇದು ನರ್ವಸ್ ಸಿಸ್ಟಮ್ ಮೇಲೆ ಹಾನಿ ಮಾಡುತ್ತದೆ ಮತ್ತು ಅತ್ಯಂತ ತೀವ್ರ ಪಿತ್ತಕೋಶ ಹಾಗೂ ಯಕೃತ್ತಿಗೆ ಕಾಯಿಲೆ ತರಬಹುದು.
ಅವಕಾಡೊ
ಇದರಲ್ಲಿ ಪರ್ಸಿನ್ ಎಂಬ ಅಂಶವಿದ್ದು ಇದು ಇದು ನಾಯಿಗಳಿಗೆ ವಿಷ. ಇದನ್ನು ತಿನ್ನುವುದರಿಂದ ಪ್ರಾಣಿಗಳಿಗೆ ಹೃದಯದ ಕಾಯಿಲೆ ಬರಬಹುದು.
ನಿಮ್ಮ ಪೆಟ್‌ಗೆ ಹೊಸ ಆಹಾರವನ್ನು ಪರಿಚಯಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಿ, ಯಾವ ಆಹಾರಗಳು ಸುರಕ್ಷಿತವೆಂಬುದನ್ನು ಖಚಿತಪಡಿಸಿಕೊಳ್ಳಿ.