ನಾಯಿ ಕೇವಲ ಮನೆಯ ಪಾಲುದಾರ ಅಲ್ಲ, ಅದು ಕುಟುಂಬದ ಒಂದು ಭಾಗ. ನಿಮ್ಮ ನಾಯಿ ಸಂತೋಷವಾಗಿರಲು, ಚುರುಕುತನದಿಂದ ಇರಲು ಮತ್ತು ಉತ್ತಮ ಜೀವನವಾಗಿರಲು ಪೋಷಕಾಂಶ ಸಮೃದ್ಧವಾದ ಆಹಾರ ಅವಶ್ಯಕ. ನಿಜವಾದ ಪೋಷಣೆ ನೀಡುವುದರಿಂದ ಮಾತ್ರ ನಿಮ್ಮ ನಾಯಿಗೆ ದೀರ್ಘಕಾಲದ ಆರೋಗ್ಯ ಸಿಗುತ್ತದೆ. ಕೆಲವೊಂದು ಆಹಾರಗಳು ನಾಯಿ ದೇಹಕ್ಕೆ ತುಂಬಾ ಹಿತಕರವಾಗಿವೆ.
ಕ್ಯಾರೆಟ್ (Carrots):
ಕ್ಯಾರೆಟ್ ನಾಯಿಯ ಹಲ್ಲುಗಳಿಗೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ನಾಯಿಯ ಚರ್ಮ, ತುಪ್ಪಳ ಹಾಗೂ ದೃಷ್ಟಿ ಶಕ್ತಿಗೂ ಸಹಾಯಮಾಡುತ್ತದೆ.
ಬಾಳೆಹಣ್ಣು (Mashed Bananas):
ಬಾಳೆಹಣ್ಣು ಪೊಟ್ಯಾಸಿಯಂ ಮತ್ತು ವಿಟಮಿನ್ ಸಿ ಹೊಂದಿದೆ. ಅದು ನಾಯಿ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ ಮತ್ತು ಶಕ್ತಿಯನ್ನೂ ಹೆಚ್ಚಿಸುತ್ತದೆ.
ಬಟಾಣಿ (Green Peas):
ಬಟಾಣಿಯಲ್ಲಿ ವಿಟಮಿನ್ ಎ, ಕೆ ಮತ್ತು ಬಿ ಇರುವುದರಿಂದ ಇದು ನಾಯಿ ಹೃದಯದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ.
ಬೇಯಿಸಿದ ಚಿಕನ್ ಅಥವಾ ಮಟನ್ (Boiled Chicken/Mutton – boneless):
ಬೇಯಿಸಿದ ಚಿಕನ್ ಅಥವಾ ಮಟನ್ ಪ್ರೋಟೀನ್ ಮೂಲವಾಗಿದೆ. ನಾಯಿ ಬೆಳವಣಿಗೆಗೆ ಮತ್ತು ಚರ್ಮದ ಆರೋಗ್ಯಕ್ಕೆ ಅವಶ್ಯಕ. ಹಸಿ ಮಾಂಸ ನೀಡಬೇಡಿ, ಬೇಯಿಸಿದ ತಾಜಾ ಮಾಂಸವು ಉತ್ತಮ.
ಓಟ್ಸ್ ಅಥವಾ ಬ್ರೌನ್ ರೈಸ್ (Oats or Brown Rice):
ಓಟ್ಸ್ ಅಥವಾ ಬ್ರೌನ್ ರೈಸ್ ನಲ್ಲಿ ನಾಯಿ ಜೀರ್ಣಾಂಗಕ್ಕೆ ನೆರವಾಗುವ ಫೈಬರ್ ಹೊಂದಿದೆ.
ಇದನ್ನು ಪ್ರತ್ಯೇಕವಾಗಿ ಅಥವಾ ಚಿಕ್ಕ ಪ್ರಮಾಣದಲ್ಲಿ ನೀಡಬಹುದು. ಇವು ನಾಯಿಗೆ ಇಷ್ಟವಾದ ಆಹಾರಗಳಲ್ಲಿ ಒಂದಾಗಿದೆ.
ನಿಮ್ಮ ನಾಯಿ ಆರೋಗ್ಯವಂತರಾಗಿರಲು ಸರಿಯಾದ ಆಹಾರ ಬೇಕು. ಈ 5 ಆಹಾರಗಳು ನೈಸರ್ಗಿಕವಾಗಿ ಪೋಷಕಾಂಶಗಳನ್ನು ಹೊಂದಿದ್ದು,ಕೃತಕ ಆಹಾರದ ಬದಲಿಗೆ ಉತ್ತಮ ಆಯ್ಕೆ.