ಲ್ಯಾಬ್ರಡಾರ್ ರಿಟ್ರೈವರ್‌ಗಳು ಪ್ರೀತಿ ಪೂರ್ಣ, ಬುದ್ಧಿವಂತ ಮತ್ತು ಕುಟುಂಬ ಸ್ನೇಹಿ ನಾಯಿಗಳಾಗಿ ಹೆಸರುವಾಸಿಯಾಗಿವೆ. ಆದರೆ ಇವುಗಳ ಆರೈಕೆ ಸರಳವಲ್ಲ. ಇವತ್ತಿನ ವೇಗದ ಜೀವನ ಶೈಲಿಯಲ್ಲಿ, ಲ್ಯಾಬ್ರಡಾರ್ ಅನ್ನು ಮನೆಗೆ ತರುವ ಮೊದಲು ನೀವು ಕೆಲವು ಅಂಶಗಳನ್ನು ಪರಿಗಣಿಸಬೇಕು.
ಶಾರೀರಿಕ ಚಟುವಟಿಕೆಯ ಅಗತ್ಯತೆ: ಲ್ಯಾಬ್ರಡಾರ್‌ಗಳು ತುಂಬಾ ಶಕ್ತಿಶಾಲಿ ನಾಯಿಗಳು. ದಿನಕ್ಕೆ ಕನಿಷ್ಠ 1-2 ಗಂಟೆಗಳ ವ್ಯಾಯಾಮ ಅವಶ್ಯಕ. ಇವುಗಳ ಚಟುವಟಿಕೆಯನ್ನು ನಿರ್ಲಕ್ಷಿಸಿದರೆ, ಇವು ಧ್ವಂಸಕಾರಿ ವರ್ತನೆ ತೋರಿಸಬಹುದು.
ಆಹಾರ ಮತ್ತು ಆರೋಗ್ಯ: ಇವು ತಿನ್ನೋದರಲ್ಲಿ ಆಸಕ್ತಿ ಹೆಚ್ಚು ಇಟ್ಟುಕೊಳ್ಳುತ್ತವೆ. ಅವುಗಳ ಈ ಲಕ್ಷಣವನ್ನು ನಿರ್ಲಕ್ಷಿಸಿ ಹಸಿವಾಗಿದೆ ಎಂದು ಊಟ ಹಾಕುತ್ತಲೇ ಇದ್ದರೆ, ಅವು ಸುಲಭವಾಗಿ ಬೊಜ್ಜಿನ ಸಮಸ್ಯೆಗೆ ತುತ್ತಾಗಬಹುದು.ಹೀಗಾಗಿ ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಮತ್ತು ವೈದ್ಯಕೀಯ ತಪಾಸಣೆ ಅಗತ್ಯ.
ತರಬೇತಿ ಮತ್ತು ಸಮಾಜೀಕರಣ: ಲ್ಯಾಬ್ರಡಾರ್‌ಗಳು ಶಿಖಾರ ನಾಯಿಗಳಿಂದ ಬಂದಿರುವುದರಿಂದ, ಇವು ಬುದ್ದಿವಂತರೂ ಆದಾಗ್ಯೂ ಶೈಕ್ಷಣಿಕ ತರಬೇತಿ ಇಲ್ಲದಿದ್ದರೆ ಶಿಸ್ತಿಲ್ಲದವರಾಗಬಹುದು. ಸಣ್ಣ ಮರಿಗಳಿದ್ದಾಗಲೇ ತರಬೇತಿ ಮತ್ತು ಸಮಾಜೀಕರಣ ಪ್ರಾರಂಭಿಸಬೇಕು.
ಸಮಯ ಮತ್ತು ಅಟೆನ್‌ಷನ್: ಇವು ಮಾನವ ಸಹವಾಸವನ್ನು ಪ್ರೀತಿಸುತ್ತವೆ. ನಿಮ್ಮಿಂದ ಹೆಚ್ಚು ಸಮಯ ಮತ್ತು ಮನಸ್ಸಿನ ಬಲ ಬೇಕಾಗುತ್ತದೆ.
ಕೂದಲು ಉದುರುವಿಕೆ: ಲ್ಯಾಬ್ರಡಾರ್ ರಿಟ್ರೈವರ್‌ಗಳು ಚಿಕ್ಕ ಕೂದಲನ್ನು ಹೊಂದಿದ್ದರೂ, ವಿಶೇಷವಾಗಿ ಋತುಮಾನದ ಬದಲಾವಣೆಗಳ ಸಮಯದಲ್ಲಿ ಅವುಗಳ ರೋಮ ಬಹಳಷ್ಟು ಉದುರುತ್ತವೆ. ನಿಯಮಿತವಾಗಿ ಅವುಗಳ ಕೂದಲನ್ನು ಬ್ರಷ್ ಮಾಡುವುದರಿಂದ ಮನೆಯಲ್ಲಿ ಅವುಗಳ ರೋಮ ಸಿಗುವ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಲ್ಯಾಬ್ರಡಾರ್‌ಗಳನ್ನು ಸಾಕುವುದು ಸಂತೋಷದಾಯಕ ಆದರೆ ಜವಾಬ್ದಾರಿಯುತ ಕೆಲಸ. ಈ ವಿಚಾರಗಳನ್ನು ಮನಪೂರ್ವಕವಾಗಿ ಪರಿಗಣಿಸಿ, ನಂತರವೇ ಈ ಪ್ರೀತಿ ಪ್ರಾಣಿಯನ್ನು ನಿಮ್ಮ ಮನೆಯ ಸದಸ್ಯನಾಗಿ ಸ್ವೀಕರಿಸಿ.