ಹೊಸದಿಗಂತ ಡಿಜಿಟಲ್ ಡೆಸ್ಕ್
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಸಲ್ಲಿಸಿದ್ದ ಜೈಲಿನಲ್ಲಿ ವಿಶೇಷ ಆಹಾರ ನೀಡುವಂತೆ ಕೋರಿ ಮನವಿಯನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ದೇವಸ್ಥಾನಕ್ಕೆ ಹೋಗದೆ ಸಾಮಾನ್ಯವಾಗಿ ಆಹಾರ ಸೇವಿಸುವುದಿಲ್ಲ. ಹಣ್ಣುಗಳು ಮತ್ತು ಸಲಾಡ್ಗಳ ಡಯಟ್ ನಲ್ಲಿದ್ದೇನೆ ಎಂದು ಎಎಪಿ ನಾಯಕ ಮನವಿಯಲ್ಲಿ ಹೇಳಿದ್ದಾರೆ. ಆದರೆ ವಿಶೇಷ ನ್ಯಾಯಾಧೀಶ ವಿಕಾಸ್ ಧಾಲ್ ಅವರ ಮನವಿಯನ್ನು ವಜಾಗೊಳಿಸಿದ್ದಾರೆ.
ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ ಜೈನ್ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.