ಹೊಸದಿಗಂತ ವರದಿ, ಚಿತ್ರದುರ್ಗ :
ಸಿದ್ರಾಮುಲ್ಲಾನ ಉಗ್ರಭಾಗ್ಯ ಹಾಗೂ ಲೀಲೆಗಳನ್ನು ತಿಳಿಯಲು ಸ್ಕ್ಯಾನ್ ಮಾಡಿ ಎಂಬ ಕ್ಯೂ ಆರ್ ಕೋಡ್ ಹೊಂದಿದ ಪೋಸ್ಟರ್‌ಗಳನ್ನು ಚಳ್ಳಕೆರೆ ನಗರದ ವಿವಿಧೆಡೆ ಅಂಟಿಸಿರುವುದು ಮಂಗಳವಾರ ಕಂಡುಬಂದಿದೆ. ಸಿದ್ದರಾಮಯ್ಯ ಅವರ ಭಾವಚಿತ್ರದೊಂದಿಗೆ ‘ಪಿಎಫ್‌ಐ ಭಾಗ್ಯ’ ಎಂಬ ಬರಹವುಳ್ಳ ಪೋಸ್ಟರ್‌ಗಳನ್ನು ಯಾತ್ರೆ ಸಾಗುವ ಮಾರ್ಗದ ಅನೇಕ ಕಡೆಗಳಲ್ಲಿ ಅಂಟಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಸಾಗುವ ಮಾರ್ಗದಲ್ಲಿ ಉದ್ದಕ್ಕೂ ಈ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಪೇಟ ಧರಿಸಿ ಕೈಯಲ್ಲಿ ಖಡ್ಗ ಹಿಡಿದ ಚಿತ್ರ ಪೋಸ್ಟರ್ ಗಳಲ್ಲಿದೆ. ರಾಜ್ಯದ ಜನರಿಗೆ ಅನ್ನಭಾಗ್ಯ ನೀಡಿದೆ ಎಂದು ಹೇಳುವ ಸಿದ್ದರಾಮಯ್ಯ ಉಗ್ರಭಾಗ್ಯವನ್ನು ನೀಡಿದ್ದಾರೆ ಎಂಬುದನ್ನು ಈ ಪೋಸ್ಟರ್‌ಗಳು ಬಿಂಬಿಸುವಂತಿವೆ.
ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರಕ್ಕೆ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಅಡಿಯಲ್ಲಿ ಈ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಸೋಮವಾರ ರಾತ್ರಿ ಇವುಗಳನ್ನು ಅಂಟಿಸಲಾಗಿದೆ ಎನ್ನಲಾಗಿದೆ. ಪೇಸಿಎಂ ಪೋಸ್ಟರ್‌ಗೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಈ ಪೋಸ್ಟರ್ ಅಭಿಯಾನ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.