ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲಪ್ಪುಳದಲ್ಲಿ ಪಿಎಫ್‌ಐ ರ್ಯಾಲಿ ಆಯೋಜಿಸಿದ್ದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕ ಯಾಹಿಯಾ ತಂಗಲ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಂಗಲ್ ನಿನ್ನೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಟೀಕೆ ಮಾಡಿದ್ದ ಎನ್ನಲಾಗಿದೆ. ಜೊತೆಗೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಇತರ 27 ಮಂದಿಯನ್ನು ಕೂಡ ಬಂಧಿಸಲಾಗಿದೆ.
ಕೇರಳದ ಅಲಪ್ಪುಳದಲ್ಲಿ ಪಿಎಫ್‌ಐ ರ್ಯಾಲಿಯಲ್ಲಿ ಹಿಂದು-ಕ್ರಿಶ್ಚಿಯನ್ನರ ವಿರುದ್ಧ ಕಳವಳಕಾರಿ ಘೋಷಣೆ ಕೂಗಿದ ಪ್ರಕರಣ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ತನ್ನ ರ್ಯಾಲಿಯಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಾಗಿಲ್ಲ ಎಂದು ಪಿಎಫ್‌ಐ ಸಮರ್ಥಿಸಿಕೊಂಡಿತ್ತು. ಆದರೆ ಪಿಎಫ್‌ಐ ಘೋಷಣೆ ಕೂಗಿದ ಪ್ರಕರಣದಲ್ಲಿ ಈವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.