ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಜಾಮಾಬಾದ್ ಭಯೋತ್ಪಾದಕ ದಾಳಿ ಸಂಚು ಪ್ರಕರಣದಲ್ಲಿ ಶಾಮೀಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದ ನಾಸ್ಸಮ್ ಮೊಹಮ್ಮದ್ ಯೂನಸ್(33)ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕರ್ನಾಟಕದ ಬಳ್ಳಾರಿಯಿಂದ ಬಂಧಿಸುವಲ್ಲಿ ಸಫಲವಾಗಿದೆ. ಈತ ನಿಷೇತ ಉಗ್ರವಾದಿ ಸಂಘಟನೆ ಪಿಎಫ್‌ಐಯ ಪ್ರಮುಖ ಶಸ್ತ್ರಾಸ್ತ್ರ ತರಬೇತುದಾರನೆಂಬ ಅಂಶವೂ ಈ ಸಂದರ್ಭ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ನಂದ್ಯಾಲ್‌ನವನಾದ ಯೂನುಸ್ ಸಹೋದರನ ಜೊತೆ ಇನ್‌ವರ್ಟರ್ ವ್ಯಾಪಾರದಲ್ಲಿ ತೊಡಗಿಕೊಂಡಿದ್ದನು.ಆದರೆ 2022ರ ಸೆಪ್ಟೆಂಬರ್‌ನಲ್ಲಿ ತನಿಖಾ ಸಂಸ್ಥೆ ಈತನ ನಿವಾಸವನ್ನು ಶೋಸಿದ ಬಳಿಕ ತಲೆಮರೆಸಿಕೊಂಡಿದ್ದ . ಬಳಿಕ ಈತ ಗುರುತನ್ನು ಮರೆಸಿಕೊಂಡು ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದನೆಂದು ಎನ್‌ಐಎ ಮೂಲಗಳು ಬುಧವಾರ ತಿಳಿಸಿವೆ. ಈತ ಬಳ್ಳಾರಿಯಲ್ಲಿ ತನ್ನ ಹೆಸರನ್ನು ಬಶೀರ್ ಎಂದು ಹೇಳಿಕೊಂಡು ಪ್ಲಂಬರ್ ಆಗಿ ಹೊಸ ಕೆಲಸದಲ್ಲಿ ತೊಡಗಿಕೊಂಡಿದ್ದನು ಎಂದು ತಿಳಿಸಿವೆ.
ಪಿಎಫ್‌ಐಯ ಮುಖಂಡರು ಮತ್ತು ಕಾರ್ಯಕರ್ತರು ಯುವಕರನ್ನು ಬ್ರೈನ್‌ವಾಷ್ ಮಾಡಿ ಸಂಘಟನೆಗೆ ಸೇರಿಸಿಕೊಂಡು, ದೇಶದಲ್ಲಿ ಇಸ್ಲಾಮಿಕ್ ಆಡಳಿತ ತರುವ ಷಡ್ಯಂತ್ರದ ಭಾಗವಾಗಿ ಅವರಿಗೆ ಭಯೋತ್ಪಾದನಾ ಕೃತ್ಯಗಳನ್ನೆಸಗಲು ಶಸ್ತ್ರಾಸ್ತ್ರ ತರಬೇತಿ ನೀಡುವ ಕ್ರಿಮಿನಲ್ ಸಂಚನ್ನು ನಡೆಸಿದ್ದನೀತ . ಸಂಚಿನ ಭಾಗವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ಯೋಜನೆ ರೂಪಿಸಿದ್ದನು. ಈತ ಎರಡು ರಾಜ್ಯಗಳಿಗೆ ಪಿಎಫ್‌ಐಯ ದೈಹಿತ ತರಬೇತಿಯ ರಾಜ್ಯ ಸಂಯೋಜಕನಾಗಿದ್ದನೆಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.
ತನಿಖೆಯ ವೇಳೆ ಈತ ಆರಂಭದಲ್ಲಿ ತಪ್ಪಿಸಿಕೊಳ್ಳುವ ಉತ್ತರ ನೀಡಿದ್ದನೆನ್ನಲಾಗಿದೆ. ಶೇಖ್ ಇಲಿಯಾಸ್ ಅಹಮ್ಮದ್ ಪಿಎಫ್‌ಐಯ ಶಸ್ತ್ರಾಸ್ತ್ರ ತರಬೇತಿ ಕಾರ್ಯಕ್ರಮದಲ್ಲಿ ಶಾಮೀಲಾಗಿದ್ದು, ಆತ ಪ್ರಕೃತ ತಲೆಮರೆಸಿಕೊಂಡಿದ್ದಾಗಿ ತಿಳಿಸಿದ್ದಾನೆ.ಆದರೆ ಈತನ ಬಂಧನದೊಂದಿಗೆ , ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಿ, ಅಮಾಯಕ ಮುಸ್ಲಿಂ ಯುವಕರನ್ನು ದುರ್ಬಳಕೆ ಮಾಡಿಕೊಂಡು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ ಪಿಎಫ್‌ಐಯ ಮತ್ತೊಂದು ಮತಾಂಧ ಸಂಚು ಬಯಲಿಗೆ ಬಂದಂತಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಇದಕ್ಕೂ ಮುನ್ನ , ತೆಲಂಗಾಣ ಪೊಲೀಸರು ಕಳೆದವರ್ಷದ ಜು.೪ರಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಅನಂತರ ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.ಈ ಬಗ್ಗೆ ಈಗಾಗಲೇ 16ಮಂದಿ ಆರೋಪಿಗಳ ವಿರುದ್ಧ ಎರಡು ಆರೋಪಪಟ್ಟಿಗಳನ್ನು ದಾಖಲಿಸಲಾಗಿದೆ.ದೇಶದಲ್ಲಿ ಭಯೋತ್ಪಾದನೆ ಮತ್ತು ವಿಧ್ವಂಸಕ ಸಂಚುಗಳಲ್ಲಿ ಶಾಮೀಲಾಗಿದ್ದ ಪಿಎಫ್‌ಐ ಮತ್ತು ಅತರ ಎಂಟು ಸಹ ಸಂಘಟನೆಗಳನ್ನು ನಿಷೇಸಿ ಕೇಂದ್ರ ಸರಕಾರವು ಕಳೆದ ವರ್ಷದ ಸೆ.28ರಂದು ಆದೇಶ ಹೊರಡಿಸಿತ್ತು.