ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ (ಶುಕ್ರವಾರ) ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕಂದಲ್ಲಿ ಕನಿಷ್ಟ 6ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಟ್ಟಡದ ಅವಶೇಷಗಳು, ಕಾಂಕ್ರೀಟ್ ಗೋಡೆ ಕೆಳಗೆ, ಶಾಪಿಂಗ್ ಮಾಲ್, ಬಂಡೆಗಳ ಕೆಳಗೆ ಮೃತದೇಹಗಳು ಪತ್ತೆಯಾಗಿವೆ ಎಂದು ದಕ್ಷಿಣ ಕೊಟಬಾಟೊ ಪ್ರಾಂತ್ಯದ ವಿಪತ್ತು ಕಚೇರಿ ಮುಖ್ಯಸ್ಥ ಅಗ್ರಿಪಿನೊ ಡೇಸೆರಾ ತಿಳಿಸಿದರು. ದುರಂತದಲ್ಲಿ ಹೆಚ್ಚಿನ ಕಟ್ಟಡಗಳು ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕಡಿತಗೊಂಡಿದ್ದ ವಿದ್ಯುತ್ ಸರಬರಾಜನ್ನು ಪುನಃಸ್ಥಾಪಿಸಲಾಗಿದೆ. ಹಾಳಾಗಿದ್ದ ರಸ್ತೆಗಳನ್ನು ಸರಿಮಾಡಲಾಗಿದ್ದು, ಸಂಚಾರಕ್ಕೆ ಸುಗಮವಾಗಿದೆ. ಭೂಕಂಪದಿಂದ ಮಾಲ್‌ನ ಸೀಲಿಂಗ್‌ನ ಭಾಗ ಕುಸಿದು ಬಿದ್ದು ಜನರು ಕಿರುಚುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
The moment a M6.7 earthquake struck #Mindanao in the Philippines.pic.twitter.com/CqjH37ju13
— Scott 🇺🇸 (@RandomHeroWX) November 18, 2023