ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೇಕಾಬಿಟ್ಟಿ ಆರೋಪಗಳನ್ನು ಮಾಡೋದು ಇವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಬಿಜೆಪಿಯವರಿಗಂತೂ ಮಾನ ಮರ್ಯಾದೆ ಯಾವುದೂ ಇಲ್ಲ, ಫೋನ್ ಟ್ಯಾಪ್ ಮಾಡಿಸೋದು ಅವರ ಚಾಳಿ, ಸಿಡಿಗಳನ್ನು ಸಹ ಅವರೇ ಮಾಡಿಸುತ್ತಾರೆ, ತನಿಖೆಯನ್ನೂ ಮಾಡುತ್ತಾರೆ ಮತ್ತು ಕೊನೆಗೆ ತೀರ್ಪನ್ನು ಸಹ ಅವರೇ ನೀಡುತ್ತಾರೆ ಎಂದು ಖಂಡ್ರೆ ಹೇಳಿದರು.
ಪ್ರಜ್ವಲ್ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ, ಆದರೆ ಬಿಜೆಪಿ ನಾಯಕರಿಗೆ ಅಸತ್ಯವನ್ನು ಸತ್ಯವೆಂದು ಪ್ರಸ್ತುತಪಡಿಸುವ ಶಕ್ತಿ ಏಕೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಸುಳ್ಳಿಗೆ ಜನ ಬೇಸತ್ತಿದ್ದಾರೆ ಎಂದರು. ಜೂನ್ 4ರಂದು ನಡೆಯಲಿರುವ ಲೋಕಸಭೆ ಚುನಾವಣೆಯಿಂದ ಪಾಠ ತಿಳಿಯಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.