ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಡಿಸೆಂಬರ್ 1 ರಂದು ಔಪಚಾರಿಕವಾಗಿ G20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. G20 ಅಥವಾ ಗುಂಪು 20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರ ಸರ್ಕಾರಿ ವೇದಿಕೆಯಾಗಿದೆ. ಕಳೆದ ತಿಂಗಳು, ಮುಂಬರುವ ವರ್ಷಕ್ಕೆ ಬಾಲಿ ಶೃಂಗಸಭೆಯಲ್ಲಿ ಪಿಎಂ ಮೋದಿ ಸಮ್ಮುಖದಲ್ಲಿ ಇಂಡೋನೇಷ್ಯಾ ಜಿ 20 ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿತು. 2023ರಲ್ಲಿ ಭಾರತದಲ್ಲಿ G20 ಶೃಂಗಸಭೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಸರ್ವಪಕ್ಷ ಸಭೆ ಕರೆದ ಪ್ರಧಾನಿ ಇದು ಯಾವುದೋ ಒಬ್ಬ ವ್ಯಕ್ತಿ, ಒಂದು ಪಕ್ಷಕ್ಕೆ ಸೀಮಿತವಾದುದಲ್ಲ, ಇದು ಇಡೀ ದೇಶಕ್ಕೆ ಸಿಕ್ಕ ಗೌರವ. ಇದನ್ನ ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂಬ ಮಾತನ್ನು ಹೇಳಿದರು.