ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿಯ ಪ್ರಯುಕ್ತ ಸಾಮರಸ್ಯ ವೇದಿಕೆಯ ವತಿಯಿಂದ ‘ತುಡರ್’ ಕಾರ್ಯಕ್ರಮ. ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಗರ್ಭಗುಡಿಯ ದೀಪದ ಬೆಳಕನ್ನು ಊರಿನ ಎಲ್ಲಾ ವರ್ಗದ ಜನರ ಸಮ್ಮುಖದಲ್ಲಿ ಸೇವಾ ಬಸ್ತಿಯ ಪ್ರಮುಖರಿಗೆ ಹಸ್ತಾಂತರಿಸಿ, ಮೆರವಣಿಗೆಯ ಮೂಲಕ ದೀಪವನ್ನು ಅವರ ಮನೆಗಳಿಗೆ, ವಠಾರಕ್ಕೆ ಕೊಂಡೊಯ್ದು ಮನೆಯಲ್ಲಿ ದೀಪ ಬೆಳಗಿಸಲಾಯಿತು.ಈ ಸಂದರ್ಭದಲ್ಲಿ ಸಾಮೂಹಿಕ ಭಜನೆ, ಗೋಪೂಜೆ, ಸಾಮರಸ್ಯದ ಸಂದೇಶ ಕುರಿತು ಉಪನ್ಯಾಸ ಮತ್ತು ಸಾಮೂಹಿಕ ಸಹಭೋಜನ ಏರ್ಪಡಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿ ಮಾತನಾಡಿದರು.