ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲಾ ಮೂರ್ತಿ ಕೆತ್ತನೆಯ ಜವಾಬ್ದಾರಿಯನ್ನು ಮೂವರು ಶಿಲ್ಪಿಗಳಿಗೆ ನೀಡಲಾಗಿತ್ತು.
ಇದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲಾ ಮೂರ್ತಿ ಅಯೋಧ್ಯೆಯಲ್ಲಿ ವಿರಾಜಮಾನವಾಗಿದೆ. ಇನ್ನು ಇದೀಗ ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ರಾಮಲಲಾ ಮೂರ್ತಿಯ ಫೋಟೊ ವೈರಲ್ ಆಗಿದೆ.
ಬಿಳಿ ಮಾರ್ಬಲ್‌ನಿಂದ ಕೆತ್ತಿದ ರಾಮಲಲಾ ಮೂರ್ತಿ ಇದಾಗಿದ್ದು. ಕೈಯಲ್ಲಿ ಚಿನ್ನದ ಬಿಲ್ಲು ಬಾಣ ಇರಿಸಲಾಗಿದೆ. ಮಂದಸ್ಮಿತವಾಗಿರುವ ಈ ಬಾಲರಾಮ ಮೂರ್ತಿ ಅದ್ಭುತವಾಗಿದ್ದು, ನೋಡುಗರಲ್ಲಿ ಭಕ್ತಿ ಮೂಡಿಸಿದೆ.
ಈ ರಾಮಲಲಾ ಮೂರ್ತಿಯನ್ನು ರಾಮಮಂದಿರದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಲಾಗಿದೆ.