ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಎರಾಸ್ಮಸ್ ವಿಮಾನದ ಕಾಕ್‌ಪಿಟ್‌ನಲ್ಲಿ ಹೆಚ್ಚು ವಿಷಕಾರಿ ಕೇಪ್ ಕೋಬ್ರಾ ಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತ ಪೈಲೆಟ್ ತನ್ನ ಸಮಯ ಪ್ರಜ್ಞೆಯಿಂದ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಪೈಲೆಟ್ ರುಡಾಲ್ಫ್ ಕಾರ್ಯಕ್ಷಮತೆಗೆ ದಕ್ಷಿಣ ಆಫ್ರಿಕಾ ವಿಮಾನಯಾನ ಪ್ರಶಂಸಿಸಿದೆ. ಕಳೆದ ಐದು ವರ್ಷಗಳಿಂದ ಹಾರಾಡುತ್ತಿರುವ ಎರಾಸ್ಮಸ್‌ನಲ್ಲಿ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಪೈಲೆಟ್ ವಿವರಿಸಿದರು.
ಸೋಮವಾರ ಬೆಳಿಗ್ಗೆ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ನಾಲ್ಕು ಪ್ರಯಾಣಿಕರೊಂದಿಗೆ ಸಣ್ಣ ವಿಮಾನ ಹಾರುತ್ತಿತ್ತು. ರೆಕ್ಕೆಯ ಕೆಳಗೆ ಕೇಪ್ ಕೋಬ್ರಾ ಇರುವುದನ್ನು ಕಂಡಿದ್ದಾರೆ. ಅದನ್ನು ಹಿಡಿಯಲು ಪ್ರಯತ್ನಿಸಿದಾಗ ದುರದೃಷ್ಟವಶಾತ್ ಅದು ಎಂಜಿನ್ ಕೌಲಿಂಗ್‌ಗಳ ಒಳಗೆ ಆಶ್ರಯ ಪಡೆದಿದೆ. ಅಲ್ಲಿ ಪರಿಶೀಲಿಸಿದ್ದು, ಕಣ್ಣಿಗೆ ಕಾಣದಿದ್ದರಿಂದ ಎಲ್ಲೋ ಹೋಗಿರಬೇಕು ಎಂದುಕೊಂಡು ಸುಮ್ಮನಾಗಿದ್ದಾರೆ. ಪೈಲೆಟ್ ಸೀಟಿನ ಕೆಳಗೆ ನೀರು ತೊಟ್ಟಿಕ್ಕುವುದನ್ನು ಗಮನಿಸಿ ಬಾಟಲಿಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಕೂಡಲೇ ಸೀಟಿನ ಕೆಳಗೆ ಹಾವಿನ ತಲೆಯಾಡಿಸಿದ್ದು ಅವರ ಕಣ್ಣಿಗೆ ಬಿದ್ದಿದೆ.
“ನಾನು ಒಂದು ಕ್ಷಣ ದಿಗ್ಭ್ರಮೆಗೊಂಡ ಮೌನವಾದೆ. ಈ ವಿಷಯ ಪ್ರಯಾಣಿಕರಿಗೆ ಹೇಳುವುದಾ ಬೇಡವಾ ಎಂಬ ಗೊಂದಲದಲ್ಲಿದ್ದೆ. ಆದರೂ ತಿಳಿಸುವುದು ಒಳ್ಳೆಯದು ಎಂದು ವಿಮಾನದೊಳಗೆ ಹಾವಿದೆ. ಅದು ನನ್ನ ಸೀಟಿನ ಕೆಳಗೆ ಇದೆ ನಾವು ಸಾಧ್ಯವಾದಷ್ಟು ಬೇಗ ವಿಮಾನವನ್ನು ತುರ್ತು ಲ್ಯಾಂಡ್ ಮಾಡಬೇಕಿದೆ” ಎಂದರು.
ವಿಮಾನವು ವೆಲ್‌ಕಾಮ್‌ನ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದುದರಿಂದ ತುರ್ತು ಲ್ಯಾಂಡಿಂಗ್ ಘೋಷಿಸಿತು. ಬಳಿಕ ಪ್ರಯಾಣಿಕರನ್ನು ಹೊರಗೆ ಕಳಿಸಿ, ಪೈಲೆಟ್ ಕೂಡ ಯಾವುದೇ ಅಪಾಯವಿಲ್ಲದೆ ಹೊರಗೆ ಬಂದಿದ್ದಾರೆ. ಕೊನೆಗೆ ಸೀಟು ಸರಿಸಿದಾಗ ಸುರುಳಿಯಾಕಾರದಲ್ಲಿ ಹಾವು ಸುತ್ತಿಕೊಂಡಿದೆ. ಹಿಡಿಯುವಷ್ಟರಲ್ಲಿ ಮತ್ತೆ ಕಣ್ತಪ್ಪಿಸಿ ಮಾಯವಾಗಿದೆ ಎಂದು ಪೈಲೆಟ್ ವಿವರಿಸಿದರು.