ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪರ್ತ್‌ನಲ್ಲಿ ನಡೆದ ಏಕೈಕ ಮಹಿಳಾ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 10 ವಿಕೆಟ್‌ಗಳಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಮೊದಲ ಇನಿಂಗ್ಸ್‌ನಲ್ಲಿ 198 ರನ್‌ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 323 ರನ್ ಬಾರಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ 149 ರನ್‌ಗೆ ಸರ್ವಪತನ ಕಂಡಿತು. ಗೆಲುವಿಗೆ 25 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಈ ಮೊತ್ತವನ್ನು ಅಜೇಯವಾಗಿ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಭಾರತ ತಂಡ ಮೂರನೇ ದಿನವನ್ನು ಆರು ವಿಕೆಟ್ ನಷ್ಟಕ್ಕೆ 105 ರನ್‌ಗಳಿಂದ ಆರಂಭಿಸಿತು. ಪ್ರತೀಕಾ ರಾವಲ್ (63) ಮತ್ತು ಸ್ನೇಹ್ ರಾಣಾ (30) ಭಾರತವನ್ನು 132 ರನ್‌ಗಳ ಗಡಿ ದಾಟಿಸಿದರು.
ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಜಾರ್ಜಿಯಾ ವೋಲ್(16) ಮತ್ತು ಫೋಬೆ ಲಿಚ್‌ಫೀಲ್ಡ್(11) ಜೋಡಿ 25 ರನ್‌ಗಳನ್ನು ಕೇವಲ 4.3 ಓವರ್‌ಗಳಲ್ಲಿ ಬಾರಿಸಿದರು.



