March 7, 2026
Saturday, March 7, 2026
spot_img

ಪಿಂಕ್​ ಬಾಲ್ ಟೆಸ್ಟ್ ಮ್ಯಾಚ್: ಆಸ್ಟ್ರೇಲಿಯಾ ವಿರುದ್ಧ ಭಾರತ 198ಕ್ಕೆ ಆಲೌಟ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರ್ತ್‌ನ WACA ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಏಕೈಕ ಪಿಂಕ್​ ಬಾಲ್ ಟೆಸ್ಟ್ (ಹಗಲು ರಾತ್ರಿ)​ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದ ಆಸೀಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಪರ ಅಗ್ರ ಕ್ರಮಾಂಕದ ಸ್ಮೃತಿ ಮಂಧಾನ (4) ಬೇಗನೆ ಪೆವಿಲಿಯನ್ ತಲುಪಿದರು. ನಂತರ, ಶೆಫಾಲಿ ವರ್ಮಾ (35) ಮತ್ತು ಪ್ರತೀಕಾ ರಾವಲ್ (18) ಸ್ವಲ್ಪ ಸಮಯದವರೆಗೆ ಇನ್ನಿಂಗ್ಸ್ ಮುನ್ನಡೆಸಿದರು.

ಬಳಿಕ ನಾಯಕಿ ಹರ್ಮನ್​ಪ್ರೀತ್​ ಕೌರ್ (19) ಸಹ ಪೆವಿಲಿಯನ್ ತಲುಪಿದರು. ದೀಪ್ತಿ ಶರ್ಮಾ (7), ರಿಚಾ ಘೋಷ್ (11), ಮತ್ತು ಸ್ನೇಹ್ ರಾಣಾ (5) ನಿರಾಸೆ ಮೂಡಿಸಿದರು. ಒಂದೆಡೆ ಸತತ ವಿಕೆಟ್ ಬೀಳುತ್ತಿದ್ದರೂ, ಜೆಮಿಮಾ ಅರ್ಧಶತಕ ಬಾರಿಸಿದರು.

ಆಸೀಸ್ ಪರ ಅನ್ನಾಬೆಲ್ ಸದರ್ಲ್ಯಾಂಡ್ 4 ವಿಕೆಟ್​ ಪಡೆದರೇ, ಲೂಸಿ ಹ್ಯಾಮಿಲ್ಟನ್ 3, ಬ್ರೌನ್ 2, ಮತ್ತು ಗಾರ್ಡ್ನರ್ 1 ವಿಕೆಟ್​ ಪಡೆದುಕೊಂಡಿದ್ದಾರೆ.

3 ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ:
ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್​ ಆರಂಭಿಸಿದ್ದು 3 ವಿಕೆಟ್​ಗಳನ್ನು ಕಳೆದುಕೊಂಡಿದೆ. ಆರಂಭಿಕ ಬ್ಯಾಟರ್​ಗಳಾದ ಜಾರ್ಜಿಯಾ ವೋಲ್ (2) ಮತ್ತು ಫೊಬೆ ಲಿಚಿಫೀಲ್ಡ್​ (9) ಬೇಗನೆ ವಿಕೆಟ್​ ಕಳೆದುಕೊಂಡರು. ನಾಯಕಿ ಹೀಲಿ ಸಹ (13) ನಿರಾಸೆ ಮೂಡಿಸಿದರು. ಸದ್ಯ ಪೆರ್ರಿ (42) ಮತ್ತು ಅನಾಬೆಲ್​ ಸುಥರ್ಲ್ಯಾಂಡ್​ (16) ಬ್ಯಾಟಿಂಗ್​ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !