June 17, 2026
Wednesday, June 17, 2026
spot_img

ಬೌಲರ್‌ಗಳ ಗುರಿ ನಾನೇ ಆಗಿದ್ದೆ, ಆದ್ರೆ ಕೋಚ್‌ ಗೆ ನನ್ನ ಮೇಲೆ ನಂಬಿಕೆ ಇತ್ತು: ವೈಭವ್ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ 15 ವರ್ಷದ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಸೋಮವಾರ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕೇವಲ 15ರ ಹರೆಯದಲ್ಲೇ ಇಂತಹ ಅದ್ಭುತ ಪ್ರದರ್ಶನ ನೀಡಿದ ಅವರು, ಲೀಗ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಪಂದ್ಯ ಬಳಿಕ ಮಾತನಾಡಿದ ವೈಭವ್, “ಬೌಲರ್‌ಗಳು ನನ್ನನ್ನು ಗುರಿಯಾಗಿಸಬಹುದು ಎಂಬ ಚರ್ಚೆ ಎಲ್ಲೆಡೆ ಇದೆ. ಆದರೆ ನನ್ನ ಕೋಚ್‌ಗಳು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಸಹಜ ಆಟ ಆಡಲು ಪ್ರೋತ್ಸಾಹಿಸಿದರು” ಎಂದು ಹೇಳಿದರು.

ಇದನ್ನೂ ಓದಿ:

ಪಿಚ್ ಬಗ್ಗೆ ಮಾತನಾಡಿದ ಅವರು, ಆರಂಭದಲ್ಲಿ ಪಿಚ್ ನಿಧಾನವಾಗಿದ್ದರೂ ನಂತರ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿತ್ತು. ಪವರ್‌ಪ್ಲೇಯಲ್ಲಿ ಮೇಲುಗೈ ಸಾಧಿಸುವುದೇ ನಮ್ಮ ಯೋಜನೆ ಆಗಿತ್ತು ಎಂದು ವಿವರಿಸಿದರು.

ತಮ್ಮ ಜೊತೆಯ ಆಟಗಾರ ಯಶಸ್ವಿ ಜೈಸ್ವಾಲ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ವೈಭವ್, ಪ್ರತೀ ಚೆಂಡಿನ ಬಳಿಕ ಮಾರ್ಗದರ್ಶನ ನೀಡಿ ಆತ್ಮವಿಶ್ವಾಸ ತುಂಬಿದರು ಎಂದು ಹೇಳಿದರು.

ಮೈದಾನದಲ್ಲಿ ಬ್ಯಾಟಿಂಗ್‌ನಿಂದ ಮಿಂಚಿದ ಈ ಯುವ ಆಟಗಾರ, ಮೈದಾನದ ಹೊರಗಿನ ಪ್ರಬುದ್ಧ ಉತ್ತರಗಳಿಂದಲೂ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !