ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನ್ಸೂನ್ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕಂಜಂಕ್ಟಿವಿಟಿಸ್ ಅಥವ ಪಿಂಕ್ ಐ ಕಣ್ಣಿನ ಪ್ರಕರಣಗಳು ಹೆಚ್ಚಾಗಿವೆ.
ಈ ಸೋಂಕು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಬ್ಯಾಕ್ಟೀರಿಯಾಗಳಿಂದ ಬರಲಿದೆ. ಇದು ಬಂದಾಗ ಒಂದರಿಂದ ಎರಡು ವಾರಗಳ ಕಾಲ ರೋಗಿಯನ್ನ ಬಾಧಿಸಲಿದ್ದು, ಕಣ್ಣಿನ ಕಾರ್ನಿಯಲ್ ಅಲ್ಸರ್, ಶಿಲೀಂಧ್ರಗಳು ಹಾಗೂ ಕಣ್ಣಿನ ಕಾರ್ನಿಯಾದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ.
ಇದರಿಂದಾಗಿ ಕಣ್ಣಿನ ಒಳಗೆ ಹುಣ್ಣುಗಳಾಗಲಿದ್ದು, ತೀವ್ರ ನೋವುಂಟು ಮಾಡುತ್ತದೆ. ಇದರಿಂದ ಕಣ್ಣುಗಳಲ್ಲಿ ನೀರು ಸೋರುವಿಕೆ ಹೆಚ್ಚಾಗಿ ಇರಲಿದೆ. ಕಣ್ಣುಗಳು ಕೆಂಪು ಬಣ್ಣಕ್ಕೆ ಬರಲಿವೆ. ಈ ವೇಳೆ ಬೆಳಕಿನ ಸೂಕ್ಷ್ಮತೆ, ಮಸುಕಾದ ದೃಷ್ಟಿ ರೋಗಲಕ್ಷಣಗಳು ಕಂಡು ಬರಲಿದ್ದು, ತಕ್ಷಣಕ್ಕೆ ಚಿಕಿತ್ಸೆ ನೀಡದಿದ್ದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರಲಿದೆ.
ಗುಲಾಬಿ ಕಣ್ಣಿನ ಲಕ್ಷಣಗಳೇನು?
ಕಣ್ಣು ಪಿಂಕ್ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ.
ಕಣ್ಣಿನ ಬಿಳಿ ಭಾಗ ಊದಿದಂತೆ ಕಾಣಿಸುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಕಣ್ಣು ತೆಗೆಯಲು ಸಾಧ್ಯವಾಗೋದಿಲ್ಲ.
ಕಣ್ಣಿನಿಂದ ಸದಾ ನೀರು ಇಳಿಯುತ್ತದೆ.
ಕಣ್ಣಿನಿಂದ ಬಿಳಿ, ಹಳದಿ ಅಥವಾ ಗ್ರೀನ್ ಬಣ್ಣದ ಪಸ್ ಬರಬಹುದು.
ಕಣ್ಣುರಿ, ಕಡಿತ, ಬಿಸಿ ಬಿಸಿ ಎನಿಸುತ್ತದೆ.
ಸೋಂಕು ಬಂದರೆ ಏನು ಮಾಡಬೇಕು?
ಸೋಂಕು ಬಂದಾಗ ಐಬುಪ್ರೊಫೇನ್ ಅಥವಾ ಕಣ್ಣಿನ ನೋವು ನಿವಾರಕಗಳನ್ನು ಬಳಸುವುದು.
ಲೂಬ್ರಿಕೇಟಿಂಗ್ ಕಣ್ಣಿನ ಹನಿಗಳನ್ನು ಬಳಸುವುದು.
ಕಣ್ಣುಗಳ ಮೇಲೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಹಾಕುವುದು.
ಶುದ್ಧವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರಲ್ಲಿ ಕಣ್ಣನ್ನ ನೆನೆಸುವುದು.
ಪ್ರತಿ ದಿನ ದಿಂಬಿನ ಕವರ್ ಬೆಡ್‌ಶೀಟ್ ಬದಲಿಸಬೇಕು.
ಶುದ್ಧ ಟವೆಲ್ ಬಳಸುವುದು.
ಕೈಗಳನ್ನು ಆಗಾಗ್ಗೆ ತೊಳೆಯುವುದು.
ಕಣ್ಣುಗಳು ಸಹಜ ಸ್ಥಿತಿಗೆ ಬರುವವರೆಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸದಿರುವುದು
ಸೋಂಕು ಬಂದಾಗ ಅಂತರ ಕಾಯ್ದುಕೊಳ್ಳುವುದು.