ಮಹಿಳಾ ಸಬಲೀಕರಣಕ್ಕೆ ʻಪಿಂಕ್‌ ಪ್ರಾಮಿಸ್‌ʼ: ರಾಜಸ್ಥಾನ್‌ ತಂಡಕ್ಕೆ ವಿಶೇಷ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್‌ ರಾಯಲ್ಸ್ (Rajasthan Royals) ತಂಡವು ಶನಿವಾರ (ಇಂದು) ಆರ್‌ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಪಿಂಕ್‌ ಬಣ್ಣದ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.

ಇದಕ್ಕೆ ಕಾರಣ ರಾಜಸ್ಥಾನದ ಮಹಿಳೆಯರ (Rajasthan Women) ಸಬಲೀಕರಣಕ್ಕೆ ನೆರವಾಗುವ ಉದ್ದೇಶ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಮತ್ತು ಆರ್‌ಸಿಬಿ (RR vs RCB) ನಡುವಿನ ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ #PinkPromise ಅಭಿಯಾನ ಆರಂಭಿಸಿದೆ.

ಏನಿದು ʻಪಿಂಕ್‌ ಪ್ರಾಮಿಸ್‌ʼಅಭಿಯಾನ?
ರಾಜಸ್ಥಾನ್‌ ರಾಯಲ್ಸ್‌ ತಂಡವು ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಅಭಿಮಾನ ಆರಂಭಿಸಿದೆ. ಅದಕ್ಕಾಗಿ ವಿಶೇಷ ಪಿಂಕ್‌ ಜೆರ್ಸಿ ಧರಿಸಿ ಆರ್‌ಸಿಬಿ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದ ಪ್ರತಿ ಟಿಕೆಟ್‌ ಬೆಲೆಯಲ್ಲಿ 100 ರೂ.ಗಳನ್ನ ಮಹಿಳಾ ಸಬಲೀಕರಣ ಕಾರ್ಯಕ್ಕೆ ಸಮರ್ಪಿಸಲಿದೆ. ಜೊತೆಗೆ ʻಆಲ್ ಪಿಂಕ್ ರಾಯಲ್ಸ್ʼ ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ಅಷ್ಟೇ ಅಲ್ಲದೇ ರಾಜಸ್ಥಾನ-ಆರ್‌ಸಿಬಿ ತಂಡಗಳು ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್‌ಗೆ ಜೈಪುರ ಜಿಲ್ಲೆಯ ಸಂಭರ್ ಗ್ರಾಮದ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಫ್ರಾಂಚೈಸಿ ವತಿಯಿಂದ ಒದಗಿಸಲಾಗುತ್ತದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!